ಇತಿಹಾಸ ಅಧ್ಯಯನ ಬದುಕಿಗೆ ಸ್ಫೂರ್ತಿಯಾಗಲಿ: ಸದಾನಂದ ಆಸ್ರಣ್ಣ
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ಕಟೀಲು ಕಾಲೇಜಿನ ಐಕ್ಯೂ ಏಸಿ ಮತ್ತು ಕನ್ನಡ ಭಾಷೆ ವಿಭಾಗದ ಸಹಯೋಗದಲ್ಲಿ ನಡೆದ ಅಬ್ಬಕ್ಕ 500 ಪ್ರೇರಣದಾಯಿ 100 ಉಪನ್ಯಾಸಗಳ ಸರಣಿಯ 80ನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾವಿದ್ಯಾಲಯ ಶಿಕ್ಷಕ ಸಂಘದ ಮಮತಾ ಶೆಟ್ಟಿ ಪ್ರಸ್ತಾವನೆಗೈದರು.
ಇಂಡಿಯನ್ ಓವರ್ಸೀಸ್ ಬ್ಯಾಂಕಿನ ನಿವೃತ್ತ ಮಹಾಪ್ರಬಂಧಕ ಬಿ.ಕೆ. ಕುಮಾರ್ ಉಪನ್ಯಾಸ ನೀಡಿ, ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡಿದ ಸಾಹಸದ ಕುರಿತು ಅರಿತುಕೊಳ್ಳಬೇಕು. ತುಳುನಾಡಿನ ಹೆಮ್ಮೆಯ ಅಬ್ಬಕ್ಕ ಉಳ್ಳಾಲದಲ್ಲಿ ಮಾಡಿದ ಆಡಳಿತ ನಮಗೆ ಸ್ಪೂರ್ತಿ. ಸ್ವಾತಂತ್ರ್ಯ ಕೇವಲ ಶಾಂತಿಯಿಂದ ಬಂದಿಲ್ಲ. ಕ್ರಾಂತಿಯೂ ಸಹಸ್ರಾರು ಮಂದಿಯ ತ್ಯಾಗ ಬಲಿದಾನಗಳಿಂದ ಆಗಿದೆ. ಇವರು ನಮ್ಮ ಮಾದರಿಗಳು ಎಂದು ಹೇಳಿದರು.
ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರು ಸನತ್ ಕುಮಾರ ಶೆಟ್ಟಿ ಅಬ್ಬಕ್ಕನ ಬದುಕಿನ ಬಗ್ಗೆ ಓದಿ ತಿಳಿಯಲು ಇಂತಹ ಕಾರ್ಯಕ್ರಮ ಸಹಾಯವಾಗಲಿ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ವಿಜಯ್ ವಿ., ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಂ., ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ವಿಧ್ಯಾರ್ಥಿ ನಾಯಕರಾದ ಕಾರ್ತಿಕ್, ತರುಣ್, ಕೃಪಾ, ಪ್ರಾರ್ಥನ ಮತ್ತಿತರರಿದ್ದರು.
ಶ್ರೀರಕ್ಷ ಮತ್ತು ವರ್ಷಿತ ಪ್ರಾರ್ಥಿಸಿದರು. ಮೋಕ್ಷಾ ಸ್ವಾಗತಿಸಿ, ವಿಶಾಖ ಕಾರ್ಯಕ್ರಮ ನಿರೂಪಿಸಿದರು. ಸೌಜನ್ಯ ರಾಣಿ ಅಬ್ಬಕ್ಕನ ಭಾವಚಿತ್ರವನ್ನು ಅತಿಥಿಗಳಿಗೆ ನೀಡಿದರು. ಶ್ರೀನಿಧಿಯ ಅಬ್ಬಕ್ಕನ ಕುರಿತಾದ ಸ್ವರಚಿತ ಕವನವನ್ನು ಬಿಂದಿಯಾ ವಾಚಿಸಿದರು. ಗಣ್ಯಶ್ರೀ ವಂದಿಸಿದರು. ಅಬ್ಬಕ್ಕನ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.