ಸೆ.17 ರಂದು ಸ್ವರ ಕುಡ್ಲ ಗ್ರ್ಯಾಂಡ್ ಫಿನಾಲೆ
ಮಂಗಳೂರು: ಕರಾವಳಿ ಸಂಗೀತ ಕಲಾವಿದ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ವತಿಯಿಂದ ಸೆ.17 ರಂದು 2 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸ್ವರ ಕುಡ್ಲ ಗ್ರ್ಯಾಂಡ್ ಫಿನಾಲೆ ಹಾಗೂ ವಾರ್ಷಿಕ ಸಮಾರಂಭ, ಪ್ರಶಸ್ತಿ ಪ್ರದಾನ, ಅಭಿನಂದನಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮ ನಡೆಯಲಿದೆ.
ಮುಂಬೈನ ಹೇರಂಬಾ ಇಂಡಸ್ಟ್ರೀಸ್ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಕಾರ್ಯಕ್ರಮ ಉದ್ಘಾಟಿಸುವರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಡಿ., ಪ್ರಮುಖರಾದ ವಾಲ್ಟರ್ ನಂದಳಿಕೆ, ಲಾರೆನ್ಸ್ ಡಿಸೋಜ, ಎಸ್. ಎಸ್.ನಾಯಕ್, ಮೊಹಮ್ಮದ್ ಅಯಾಜ್, ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರು, ನಾಗೇಂದ್ರ ಬಾಳಿಗ, ಸತೀಶ್ ಕುಮಾರ್ ಬಜಾಲ್, ಮಾಧವ ಬಿ.ಎಂ., ಕೆ. ಆರ್. ಜಯಾನಂದ, ಜಗದೀಶ್ ಶೆಟ್ಟಿ ಬೋಳೂರು, ಗಿರೀಶ್ ಆಳ್ವ ತೌಡುಗೋಳಿ, ಪ್ರಶಾಂತ್ ಲಕ್ಷ್ಮಣ್ ನಾಯಕ್, ದೀಪಕ್ ರೈ ಪಾಣಾಜೆ ಭಾಗವಹಿಸಲಿದ್ದಾರೆ ಎಂದು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಗೀತ ಕ್ಷೇತ್ರದ ಹಿರಿಯ ಕಲಾಸಾಧಕರಾದ ತೊನ್ಸೆ ಪುಷ್ಕಳ ಕುಮಾರ್, ಹನೀಫ್ ಪರ್ಲಿಯಾ, ಐವನ್ಸೀಕ್ವೆರ ಅವರಿಗೆ ಕರಾವಳಿ ಸಂಗೀತ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸ್ವರ ಕುಡ್ಲ ಸೀಸನ್ 7 ಗ್ರ್ಯಾಂಡ್ ಫಿನಾಲೆ ಪೂರ್ವಭಾವಿಯಾಗಿ ಸ್ವರ ಕುಡ್ಲ ಆಡಿಷನ್ ಮತ್ತು ಸೆಮಿ-ನಲ್ ರೌಂಡ್ ನಗರದ ರಥಬೀದಿ ಬಿಇಎಂ ಹೈಸ್ಕೂಲ್ನಲ್ಲಿ ಸೆ.14ರಂದು ಬೆಳಗ್ಗೆ 9.30ರಿಂದ ನಡೆಯಲಿದೆ ಎಂದರು.
ಉಪಾಧ್ಯಕ್ಷ ಧರ್ಮರಾಜ್, ಕೋಶಾಧಿಕಾರಿ ಹರಿಣಿ ಉದಯ್, ಪ್ರಧಾನ ಕಾರ್ಯದರ್ಶಿ ರಾಮ್ಕುಮಾರ್ ಅಮೀನ್, ನಿಕಟಪೂರ್ವ ಅಧ್ಯಕ್ಷರಾದ ದೀಪಕ್ರಾಜ್ ಉಳ್ಳಾಲ್, ಮಾಜಿ ಅಧ್ಯಕ್ಷರಾದ ಮೊಹಮ್ಮದ್ ಇಕ್ಬಾಲ್, ಮುರಳೀಧರ ಕಾಮತ್ ಉಪಸ್ಥಿತರಿದ್ದರು.