ಆಶ್ನಾ ಜುವೆಲ್ ಡಿಸೋಜಾ ಮಿಸ್ ಇಂಡಿಯಾ ಆಸ್ಟ್ರಲ್ 2025

ಆಶ್ನಾ ಜುವೆಲ್ ಡಿಸೋಜಾ ಮಿಸ್ ಇಂಡಿಯಾ ಆಸ್ಟ್ರಲ್ 2025


ಮಂಗಳೂರು: ಫೆರಾರ್‌ನ ಆಶ್ನಾ ಜುವೆಲ್ ಡಿಸೋಜಾ, ಶನಿವಾರ ಬೆಂಗಳೂರಿನ ದಿ ಕಿಂಗ್ಸ್ ಮೀಡೋಸ್‌ನಲ್ಲಿ ನಡೆದ ವೈಭವಮಯ ಅಂತಿಮ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಆಸ್ಟ್ರಲ್ 2025ರಾಗಿ ಆಯ್ಕೆಯಾದರು. 

ದೇಶದ ವಿವಿಧ ಭಾಗಗಳಿಂದ ಬಂದ 45 ಸ್ಪರ್ಧಿಗಳ ನಡುವೆ ನಡೆದ ಈ ಸ್ಪರ್ಧೆ, ಮಿಸ್ & ಮಿಸೆಸ್ ಇಂಡಿಯಾ ಆಸ್ಟ್ರಲ್ ಪೇಜೆಂಟ್ಸ್ನ 9ನೇ ಆವೃತ್ತಿಯಾಗಿತ್ತು. ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಕಿರೀಟದ ಜೊತೆಗೆ, ಆಶ್ನಾ ಹಲವು ಉಪಶೀರ್ಷಿಕೆಗಳನ್ನೂ ತಮ್ಮದಾಗಿಸಿಕೊಂಡರು. ಅವುಗಳಾದ ಮಿಸ್ ಬೆಸ್ಟ್ ಟಾಲೆಂಟ್, ಮಿಸ್ ಬೆಸ್ಟ್ ಸ್ಟೇಜ್ ಪ್ರೆಸೆನ್ಸ್, ಹಾಗೂ ಮಿಸ್ ಬೆಸ್ಟ್ ವಾಕ್ ಪ್ರಶಸ್ತಿಗಳು ಅವರನ್ನು ಈ ಸ್ಪರ್ಧೆಯ ಪ್ರಮುಖ ವಿಜೇತೆಯನ್ನಾಗಿ ಮಾಡಿತು. ಈ ಸಾಧನೆಯೊಂದಿಗೆ, ಆಶ್ನಾ ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಇಂಡಿಯಾ 2026 ಎಂಬ ಗೌರವಾನ್ವಿತ ಬಿರುದನ್ನೂ ಗಳಿಸಿದ್ದಾರೆ.

ಇದರ ಮೂಲಕ ಅವರು ಮುಂದಿನ ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article