ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನಿಂದ ಮೂವರು ಶಿಕ್ಷಕಿಯರಿಗೆ ಸನ್ಮಾನ
Thursday, September 11, 2025
ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಶಿಕ್ಷಕರ ದಿನವನ್ನು ಕೀತಿ೯ ನಗರದಲ್ಲಿರುವ ಕ್ಲಬ್ ನ ಸಭಾಂಗಣದಲ್ಲಿ ಆಚರಿಸಲಾಯಿತು.
ಕ್ಲಬ್ ನ ಅಧ್ಯಕ್ಷ ಹರೀಶ್ ಎಂ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಬೆಳುವಾಯಿ ಸ್ಫೂತಿ೯ ವಿಶೇಷ ವಿಶೇಷ ಮಕ್ಕಳ ಶಾಲೆಯ ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಅನಿತಾ ರೊಡ್ರಿಗಸ್, ಪ್ರಾಂತ್ಯ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಶಶಿಕಲಾ ಎಚ್. ಎಂ ಹಾಗೂ ಅಶ್ವತ್ಥಪುರದ ವಾಣಿ ವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕಿ ಉಮಾಶ್ರೀ ಅವರನ್ನು ಸನ್ಮಾನಿಸಲಾಯಿತು.
ಜೈನ ಪ್ರೌಢಶಾಲೆಯ ಶಿಕ್ಷಕ ನಿತೇಶ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕ್ಲಬ್ ನ ಕಾಯ೯ದಶಿ೯ ಭರತ್ ಶೆಟ್ಟಿ ಹಾಗೂ ಸದಸ್ಯರು ಈ ಸಂದಭ೯ದಲ್ಲಿದ್ದರು. ಜೀವಿತಾ ಶಂಕರ್ ಕಾಯ೯ಕ್ರಮ ನಿರೂಪಿಸಿದರು.