ಸೆ.22-ಅ.3: ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಸೆ.22-ಅ.3: ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ


ಮಂಗಳೂರು: ಇತಿಹಾಸ ಪ್ರಸಿದ್ದಿ ಪಡೆದಿರುವ ಶ್ರೀ ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೆ.22 ರಿಂದ ಅ.3 ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ವಿಜಯ ದಶಮಿಯಂದು 500ಕ್ಕೂ ಹೆಚ್ಚು ಮಕ್ಕಳಿಗೆ ವಿಧ್ಯಾರಂಭನಡೆಯಲಿದೆ. ಮಹಾನವಮಿಯಂದು ಚಂಡಿಕಾಹೋಮ 10 ಸಾವಿರಕ್ಕೂ ಮಿಕ್ಕಿ ವಾಹನ ಪೂಜೆ (ಆಯುಧ ಪೂಜೆ) ರಾತ್ರಿ ದೊಡ್ಡ ವಿಶೇಷ ರಂಗಪೂಜೆ ನಂತರ ಸಣ್ಣ ರಥೋತ್ಸವ ನಡೆಯಲಿದೆ.

ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸರಳ ವಿವಾಹ ಮಂಟಪದಲ್ಲಿ 2350ಕ್ಕೂ ಹೆಚ್ಚು ಬಡವರ ವಿವಾಹಗಳು ನಡೆದಿವೆ. ಅಶಕ್ತರಿಗೆ ಸರಳ ರೀತಿಯಾಗಿ ವಿವಾಹವನ್ನು ಧರ್ಮಾರ್ಥವಾಗಿ ನಡೆಯಲಿದೆ. ದೂರದಿಂದ ಬರುವ ಭಕ್ತಾಭಿಮಾನಿಗಳ ಅನುಕೂಲಕ್ಕೆ ಪ್ರತೀ ಶುಕ್ರವಾರ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ.

ವಿಜಯದಶಮಿಯಂದು ಬೆಳಗ್ಗೆ ತೆನೆ ಹಬ್ಬ 8 ಗ್ರಾಮದ ಜನರಿಗೆ ತೆನೆ ನೀಡುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ. ತದ ನಂತರ ತುಲಭಾರ ಸೇವೆ, ಮಧ್ಯಾಹ್ನ ರಥಾರೋಹಣವಾಗಿ ಸಂಜೆ 6 ಗಂಟೆಗೆ ಸರಿಯಾಗಿ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಸಂದರ್ಭದಲ್ಲಿ ದೇವರಿಗೆ 10 ದಿನಗಳಲ್ಲಿ ವಿಶೇಷ ಅಲಂಕಾರವಾಗಿ ದುರ್ಗಾದೇವಿ, ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷಮರ್ದಿನಿ, ಚಂಡಿಕೆ, ಸರಸ್ವತಿ, ವಾಈಶ್ವರಿ, ಮಂಗಳಾದೇವಿಯ ಅಲಂಕಾರಗಳು ನಡೆಯಲಿವೆ. ಅ.3 ರಂದು ಸಂಜೆ 7 ಗಂಟೆಗೆ ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಸಂಪನಗೊಳ್ಳಲಿದೆ.

ಸೆ.18 ರಂದು ಬೆಳಗ್ಗೆ 10.30 ರಿಂದ ಪ್ರತಿ ಸಂಜೆ ಸ್ಟಾಲ್‌ಗಳ ಏಲಂ ಕರೆಯಲಾಗುವುದು. ಸೆ.26 ರಿಂದ 28ರವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೀರೆ ಏಲಂ ಕರೆಯಲಾಗುವುದು. ನವರಾತ್ರಿ ಉತ್ಸವದ ಸಮಯದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಾಗೂ ಪ್ರತೀ ದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಡಂ. ಅರುಣ್ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article