ಸೇವಾ ಪಾಕ್ಷಿಕ ಕಾರ್ಯಾಗಾರ-2025

ಸೇವಾ ಪಾಕ್ಷಿಕ ಕಾರ್ಯಾಗಾರ-2025


ಮಂಗಳೂರು: ಸೆ.13 ರಂದು ಸೇವಾ ಪಾಕ್ಷಿಕ-2025ರ ಜಿಲ್ಲಾ ಮಟ್ಟದ ಕಾರ್ಯಗಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಸೇವಾ ಪಾಕ್ಷಿಕ ಕಾರ್ಯಾಗಾರವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಉದ್ಘಾಟಿಸಿ, ಪ್ರಧಾನ ಮಂತ್ರಿಯ ಜನ್ಮದಿನವಾದ ಸೆ.17 ರಿಂದ ಗಾಂಧಿ ಜಯಂತಿಯ ಅ.2 ರ ತನಕ 15 ದಿನಗಳ ಸೇವಾ ಕಾರ್ಯಕ್ರಮ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಕಾರ್ಯಕರ್ತರಿಗೆ ಆಟೋಟ ಕಾರ್ಯಕ್ರಮಗಳು, ಪ್ರಧಾನ ಮಂತ್ರಿಯವರ ಜೀವನ ಚರಿತ್ರೆಯನ್ನು ಪ್ರದರ್ಶಿನಿ ಮೂಲಕ ಮಾಡಿ ಸೇವಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು ಎಂದು ತಿಳಿಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟರವರು ಮೋದಿಜೀಯವರ ಕೇಂದ್ರ ಸರಕಾರದ ಸಾಧನೆಗಳನ್ನು ಹಾಗೂ ಜಿಎಸ್‌ಟಿ ರಿಯಾಯಿತಿ ಘೋಷಣೆಯಿಂದ ಜನಸಾಮಾನ್ಯರಿಗೆ ಆಗುವ ಪ್ರಯೋಜನಗಳನ್ನು ತಳಮಟ್ಟದ ಜನಸಾಮಾನ್ಯರಿಗೆ ಹಾಗೂ ಮತದಾರರಿಗೆ ತಿಳಿಸುವಂತೆ ಹೇಳಿದರು.

ವಿಕಸಿತ ಭಾರತ, ಆತ್ಮ ನಿರ್ಭರ ಭಾರತ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕರಾದ ದೇವಪ್ಪ ಪೂಜಾರಿಯವರು ಪ್ರ್ರಸ್ತಾವಿಕವಾಗಿ ಮಾತನಾಡಿದರು. 

ಸಹ ಸಂಚಾಲಕರಾದ ಸೀತರಾಮ ಬೆಳಾಲ್ ಪ್ರಧಾನಿ ನರೇಂದ್ರ ಮೋದಿಜೀಯವರ ಜೀವನ ಆಧಾರಿತ ಪ್ರದರ್ಶಿನಿಯ ಬಗ್ಗೆ ತಿಳಿಸಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ, ಸೇವಾ ಪಾಕ್ಷಿಕ ಅಭಿಯಾನದ ಮಂಡಲ ಸಂಚಾಲಕರು ಮತ್ತು ಸಹ ಸಂಚಾಲಕರು ಉಪಸ್ಥಿತರಿದ್ದರು.

ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು. ಸಂದ್ಯಾವೆಂಕಟೇಶ್ ಸ್ವಾಗತಿಸಿ, ವಿನಯ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article