ಸೆ:30 ಸಾರ್ವಜನಿಕ ‘ಮುಕ್ತ ರಸಪ್ರಶ್ನೆ’ ಸ್ಪರ್ಧೆ

ಸೆ:30 ಸಾರ್ವಜನಿಕ ‘ಮುಕ್ತ ರಸಪ್ರಶ್ನೆ’ ಸ್ಪರ್ಧೆ

ಮಂಗಳೂರು: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಸೆ.30 ರಂದು ಮಧ್ಯಾಹ್ನ 2.30ಕ್ಕೆ ‘ರಸಪ್ರಶ್ನೆ’ ಸ್ಪರ್ಧೆ ನಡೆಯಲಿದೆ.

ಉಳ್ಳಾಲದ ಶಾರದಾ ನಿಕೇತನದಲ್ಲಿ ಜರುಗಲಿರುವ ಈ ಸ್ಪರ್ಧೆಯಲ್ಲಿ ಸಾರ್ವಜನಿಕರೆಲ್ಲರಿಗೂ ಮುಕ್ತವಾಗಿ ಸ್ಪರ್ಧಿಸಲು ಅವಕಾಶವಿದ್ದು ಇಬ್ಬರು ತಂಡವಾಗಿ ಭಾಗವಹಿಸಬೇಕಾಗುತ್ತದೆ. 

ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದೊಂದಿಗೆ ನಗದು ಪುರಸ್ಕಾರ ನೀಡಲಾಗುವುದು. ಪ್ರೊ. ಗಿಲ್ ರಾಜ್, ಆಸ್ಟ್ರೇಲಿಯಾ ಅವರ ಆಯೋಜಕತ್ವದಲ್ಲಿ ನಡೆಯಲಿರುವ ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಂಕಟಗಿರಿ ಬೇಕಲ್-9845083765 ಅಥವಾ ದಿನೇಶ್ ಉಳ್ಳಾಲ-9341109898 ಇವರನ್ನು ಸಂಪರ್ಕಿಸಬಹುದೆಂದು ಉತ್ಸವ ಸಮಿತಿಯ ಅಧ್ಯಕ್ಷ ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article