ಕುಣಿತ ಭಜನಾ ಸ್ಪರ್ಧೆ: ತಂಡಗಳಿಗೆ ಆಹ್ವಾನ
Tuesday, September 23, 2025
ಮಂಗಳೂರು: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ, ಉಳ್ಳಾಲ ಇದರ 78ನೇ ವರ್ಷದ ಉತ್ಸವದ ಪ್ರಯುಕ್ತ ‘ಕುಣಿತ ಭಜನಾ ಸ್ಪರ್ಧೆ’ ಆಯೋಜಿಸಲಾಗಿದ್ದು, ಅ.1 ರಂದು ಬೆಳಗ್ಗೆ 11 ಗಂಟೆಯಿಂದ ಉಳ್ಳಾಲದ ಶ್ರೀ ಶಾರದಾ ನಿಕೇತನದಲ್ಲಿ ಸ್ಪರ್ಧೆ ನಡೆಯಲಿದೆ.
ಭಜನಾ ತಂಡಗಳಿಗೆ ಮುಕ್ತ ಅವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿಕೊಳ್ಳುವ ತಂಡಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಸೆ.25 ರೊಳಗಾಗಿ ತಂಡಗಳು ಹೆಸರು ನೋಂದಾಯಿಸಿಕೊಳ್ಳಬೇಕು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 15,000 ರೂ., ದ್ವಿತೀಯ ಸ್ಥಾನ ಪಡೆದವರಿಗೆ 10,000 ರೂ. ಹಾಗೂ ತೃತೀಯ ಸ್ಥಾನಿಗೆ 5,000 ರೂ.ವನ್ನು ಶಾಶ್ವತ ಟ್ರೋಫಿಯೊಂದಿಗೆ ನೀಡಲಾಗುವುದು, ಉಚಿತ ಪ್ರವೇಶವಿದ್ದು ಭಾಗವಹಿಸುವ ತಂಡಗಳಿಗೆ ಊಟೋಪಚಾರದ ವ್ಯವಸ್ಥೆ ಇರುವುದು. ವಾಟ್ಸಪ್‌ನಲ್ಲಿ ಮಾತ್ರ ಹೆಸರು ನೋಂದಾಯಿಸಬೇಕು (8317420972) ಎಂದು ಪ್ರಕಟಣೆ ತಿಳಿಸಿದೆ.