
ಸ್ಟೇಟಸ್ ಹಾಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
Monday, September 8, 2025
ಮಂಗಳೂರು: ‘ನನ್ನ ಮನೆಯವರೇ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ, ಬೇರೆಯವರಿಂದ ನಿರೀಕ್ಷಿಸುವುದೇ ಸಾಧ್ಯವೇ?’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಟೇಟಸ್ ಹಾಕಿ, ಯುವತಿಯೊಬ್ಬಳು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಖ್ಯಪ್ರಾಣ ದೇವಸ್ಥಾನ ಸಮೀಪ ಗೋಲ್ಡನ್ ಚೇಂಬರ್‌ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಯುವತಿಯನ್ನು ಖಷಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬಂದರ್ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಯುವತಿಯು ಮಾನಸಿಕ ಒತ್ತಡದಲ್ಲಿದ್ದು, ಕುಟುಂಬದಿಂದ ಬೇಕಾದ ಪ್ರೀತಿ, ಬೆಂಬಲ ಮತ್ತು ಆತ್ಮೀಯ ಸಂವಹನದ ಕೊರತೆಯಿಂದ ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಯುವತಿ ಆತ್ಮಹತ್ಯೆ ದೃಶ್ಯ ನೋಡಿ ಸ್ಥಳೀಯರು ಶೋಕಕ್ಕೆ ಒಳಪಟ್ಟಿದ್ದಾರೆ. ಯುವತಿ ಕಟ್ಟಡದಿಂದ ಜಿಗಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯುವತಿ ಕಟ್ಟಡದಿಂದ ದೊಪ್ಪನೆ ಬಿದ್ದಿದ್ದು, ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬೀಳುವುದು ವಿಡಿಯೋದಲ್ಲಿ ದಾಖಲಾಗಿದೆ.