
ಕುದ್ರೋಳಿ ಕ್ಷೇತ್ರದಲ್ಲಿ ನಾರಾಯಣ ಗುರು ಜಯಂತಿ ಆಚರಣೆ
ಉದ್ಘಾಟಿಸಿದ ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ನಾರಾಯಣ ಗುರು ಜಗತ್ತಿಗೆ ಒಂದೇ ಜಾತಿ,ಒಂದೇ ಮತ ಒಂದೇ ದೇವರು ಎನ್ನುವ ಸಂದೇಶ ನೀಡಿದ ಮಹಾನ್ ಸಂತ. ನಾರಾ ಯಣ ಗುರುಗಳು ಬಾಲ್ಯದಲ್ಲಿದ್ದ ಸಮಾಜ ದಲ್ಲಿ ತಾರತಮ್ಯ ಹೋಗಲಾಡಿಸಲು ಶ್ರಮಿಸಿದ ಮಹಾನ್ ವ್ಯಕ್ತಿ ದೇವರ ಸ್ಥಾನಮಾನ ಪಡೆದವರು.ಹಿಂದುಳಿದ ವರ್ಗದವರು ಸಮಾಜದಲ್ಲಿ ಉನ್ನತ ಸ್ಥಾನ ಮಾನ ಪಡೆಯಲು ಕಾರಣರಾದ ಮಹಾನ್ ಸಂತ ಅವರ ಸಂದೇಶವನ್ನು ನಮ್ಮ ಬದುಕಿಸಿ ಕೊಳ್ಳೋಣ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ನಾರಾಯಣ ಗುರುಗಳ ಜಯಂತಿ ಇಡೀ ಮನುಕುಲಕ್ಕೆ ನೀಡಿದ ಸಂದೇಶವಾಗಿದೆ ಆ ಕಾರಣದಿಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಜಯಂತಿ ಆಚರಿಸಲು ತೀರ್ಮಾನಿಸಿತು.ಕೇರಳದಲ್ಲಿ ನಾರಾಯಣ ಗುರುಗಳ ಸಂದೇಶದ ಮೂಲಕ ಸಾಮಾಜಿಕವಾಗಿ,ಶೈಕ್ಷಣಿಕ ವಾಗಿ ಸೇರಿದಂತೆ ಸಮಗ್ರ ಸಮಾಜದ ಅಭಿವೃದ್ಧಿಗೆ ಕಾರಣ ವಾಗಿದೆ. ಮಾನವ ಕುಲ ಒಂದೇ ಜಾತಿಗೆ ಸೇರಿದೆ ಅಲ್ಲಿ ಬೇಧ ಬಾವ ಸಲ್ಲದು. ಸಮಾಜದ ಒಗ್ಗಟ್ಟು ಮುಖ್ಯ. ನಾರಾಯಣ ಗುರುಗಳ ಸಂದೇಶ ದೇಶದ ಎಲ್ಲಾ ಕಡೆ ತಲುಪಬೇಕಾದ ಅಗತ್ಯವಿದೆ ಎಂದರು.
ನಾರಾಯಣ ಗುರು ಜಯಂತಿಯ ಬಗ್ಗೆ ಸ್ಮಿತೇಶ್ ಎಸ್ ಬಾರ್ಯ ಉಪನ್ಯಾಸ ನೀಡಿ, ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಸಾಮಾಜಿಕ ಧಾರ್ಮಿಕ ಮೌನಕ್ರಾಂತಿ ನಡೆಸಿದ ಎಸ್ ಎನ್ ಡಿಪಿ ಯಂತಹ ಸಂಘಟನೆ ಗಳ ಮೂಲಕ ಜ್ಞಾನದ ದಾರಿಯನ್ನು ತೆರೆದು ತೋರಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು.ವಿಶ್ವ ಶಾಂತಿಗೆ ಬ್ರಹ್ಮಶ್ರೀ ನಾರಾಯಣ ಸಂದೇಶ ಸಕಾಲಿಕವಾಗಿದೆ ಎಂದರು.
ಸಮಾರಂಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್,ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ,ಅಪರ ಜಿಲ್ಲಾಧಿಕಾರಿ ರಾಜು ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷಜಯರಾಜ್ ಎಚ್ ಸೋಮ ಸುಂದರ್ ಕೋಶಾಧಿಕಾರಿ ಪದ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿ,ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.