
ಮಂಜುನಾಥ್ ಬಂಟ್ವಾಳ ತಹಶೀಲ್ದಾರರಾಗಿ ಅಧಿಕಾರ ಸ್ವೀಕಾರ
Monday, September 8, 2025
ಬಂಟ್ವಾಳ: ಬಂಟ್ವಾಳ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಜಿ. ಮಂಜುನಾಥ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ಆಗಿದ್ದ ಡಿ. ಅರ್ಚನಾ ಭಟ್ ಅವರು ವರ್ಗಾವಣೆಗೊಂಡ ಬಳಿಕ ತೆರವಾದ ಸ್ಥಾನಕ್ಕೆ ಮಂಜುನಾಥ್ ಅವರನ್ನು ಬಂಟ್ವಾಳಕ್ಕೆ ವರ್ಗಾವಣೆಗೊಳಿಸಿ ತಿಂಗಳ ಹಿಂದೆಯೇ ಸರಕಾರ ಅದೇಶಿಸಿತ್ತು. ಆದರೆ ಅವರು ಸೋಮವಾರ ಬಂಟ್ವಾಳ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
2015ರಲ್ಲಿ ವಿರಾಜಪೇಟೆ ತಾಲೂಕಿನ ಕಂದಾಯ ಇಲಾಖೆಯಲ್ಲಿ ಗ್ರೇಡ್ 3 ತಹಶಿಲ್ದಾರ್ ಆಗಿ ನೇಮಕಗೊಂಡ ಬಳಿಕ ಬೆಂಗಳೂರು ದಕ್ಷಿಣ, ಚನ್ನರಾಯಪಟ್ಟಣ, ತುಮಕೂರು ತಾಲೂಕಿನಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಆ ಬಳಿಕ ಮೆಟ್ರೋ, ಬೆಂಗಳೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸುಳ್ಯದಲ್ಲಿಯು ತಹಶಿಲ್ದಾರ್ ಆಗಿದ್ದು, ಅಲ್ಲಿಂದ ಕನಕಪುರಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಕನಕಪುರದಿಂದ ಬಂಟ್ವಾಳಕ್ಕೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.