ಕಸ ಬಿಸಾಡಿದವರಿಗೆ ದಂಡ: ಪೊಲೀಸ್ ಇಲಾಖೆಯ ಸಹಕಾರ

ಕಸ ಬಿಸಾಡಿದವರಿಗೆ ದಂಡ: ಪೊಲೀಸ್ ಇಲಾಖೆಯ ಸಹಕಾರ


ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ನೈರ್ಮಲ್ಯ ಕಾಪಾಡುವ ಪ್ರಯತ್ನಕ್ಕೆ ಪೂರಕವಾಗಿ, ಕಸ ಬಿಸಾಡಿದ ವ್ಯಕ್ತಿಗೆ ದಂಡ ವಿಧಿಸಿರುವ ಘಟನೆ ವರದಿಯಾಗಿದೆ.

ಸೆಪ್ಟೆಂಬರ್ 8ರಂದು ಕುಮಾರಧಾರ ನದಿಯ ಸೇತುವೆ ಮೇಲಿಂದ ಕಾರ್ಕಳದ ವೇದವ್ಯಾಸ ತಂತ್ರಿ ಎಂಬವರು ಕಸ ಬಿಸಾಡಿದ ದೃಶ್ಯವನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಮಾಹಿತಿ ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನೀಡಲಾಗಿತ್ತು.

ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುರಿತು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಂಚಿಕೊಂಡಿದ್ದು, ಪೊಲೀಸರು ವಾಹನ ಮಾಲಿಕರನ್ನು ಪತ್ತೆಹಚ್ಚಲು ನೆರವಾದರು. ನಂತರ ಗ್ರಾಮ ಪಂಚಾಯತ್ ಕಾನೂನು ಕ್ರಮ ಕೈಗೊಂಡು, ವೇದವ್ಯಾಸ ತಂತ್ರಿ ಅವರಿಗೆ 2000 ರೂ. ದಂಡ ವಿಧಿಸಿತು.


ಪಂಚಾಯತ್ ಸಂದೇಶ:

ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಈ ಕಾರ್ಯಾಚರಣೆಯ ಮೂಲಕ ಸಾರ್ವಜನಿಕರಿಗೆ ಪ್ರಮುಖ ಸಂದೇಶ ನೀಡಿದ್ದಾರೆ. ಭಕ್ತರು ಹಾಗೂ ಸ್ಥಳೀಯರು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ರೀತಿಯ ಕಸವನ್ನು ನದಿ ನೀರಿಗೆ ಬಿಸಾಡುವುದು ತಪ್ಪೇ ತಪ್ಪು. ಇದು ಪರಿಸರ ಮಾಲಿನ್ಯ ಹೆಚ್ಚಿಸುವುದಲ್ಲದೆ, ಪವಿತ್ರ ಕುಮಾರಧಾರ ನದಿಯ ಸ್ವಚ್ಛತೆಯನ್ನು ಹಾಳುಮಾಡುತ್ತದೆ ಎಂದು ತಿಳಿಸಿದ್ದಾರೆ.

ಸ್ಥಳೀಯರ ಸಹಕಾರದಿಂದ ಇಂತಹ ಘಟನೆಗಳು ಪತ್ತೆಯಾಗುತ್ತಿರುವುದರಿಂದ, ಮುಂದೆ ಯಾರೂ ಕಸ ಬಿಸಾಡುವ ಧೈರ್ಯ ಮಾಡಬಾರದು ಎಂಬ ಎಚ್ಚರಿಕೆಯ ಸಂದೇಶವೂ ನೀಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article