
ಮೂಡುಬಿದಿರೆ ವಲಯದ ಚಚ್೯ಗಳಲ್ಲಿ ತೆನೆ ಹಬ್ಬದ ಸಂಭ್ರಮ
Monday, September 8, 2025
ಮೂಡುಬಿದಿರೆ: ಮಾತೆ ಮರಿಯಮ್ಮ ಜನುಮ ದಿನದ ಪ್ರಯುಕ್ತ ವಲಯದ 12 ಚಚ್೯ಗಳಲ್ಲಿ ಸೋಮವಾರ ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್ ಕಟ್ಟೆ ಇಲ್ಲಿನ ಧಮ೯ಗುರು ರೆ. ಫಾ. ರೊನಾಡ್ಡ್ ಡಿ'ಸೋಜ ಅವರ ನೇತೃತ್ವದಲ್ಲಿ ತೆನೆ ಹಬ್ಬ (ಮೊಂತಿ ಫೆಸ್ತ್)ವನ್ನು ಧಾಮಿ೯ಕ ಪೂಜಾ ವಿಧಿ ವಿಧಾನಗಳೊಂದಿಗೆ ಅತ್ಯಂತ ಶ್ರದ್ಧೆ ಭಕ್ತಿಯೊಂದಿಗೆ ಆಚರಿಸಲಾಯಿತು.
ಉಪಾಧ್ಯಕ್ಷ ಸುನಿಲ್ ಮಿರಾಂದ, ಕಾಯ೯ದಶಿ೯ ಲೀಡಿಯಾ ಡಿ'ಸೋಜ, ಇಪ್ಪತ್ತೊಂದು ಆಯೋಗದ ಸಂಚಾಲಕರಾದ ಆಲ್ವೀನ್ ಮಿನೇಜಸ್ ಹಾಗೂ ಚಚ್೯ಗೆ ಒಳಪಟ್ಟ ಗ್ರಾಮಸ್ಥರು ಈ ಸಂದಭ೯ದಲ್ಲಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
*ಹೋಲಿ ಸ್ಪಿರೀಟ್ ಚಚ್೯ ಸಂಪಿಗೆ ಇಲ್ಲಿನ ಧಮ೯ಗುರು ರೆ. ಫಾ. ವಿನ್ಸೆಂಟ್ ಡಿ'ಸೋಜ ಅವರ ನೇತೃತ್ವದಲ್ಲಿ ಮೊಂತಿ ಫೆಸ್ತ್ ಹಬ್ಬವನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.
*ತಾಕೊಡೆ ಪವಿತ್ರ ಶಿಲುಬೆಯ ದೇವಾಲಯದಲ್ಲಿ ಮೊಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು . ಮಂಗಳೂರು ಧರ್ಮಪ್ರಾಂತ್ಯದ ಯುವ ವಿದ್ಯಾರ್ಥಿ ಸಂಚಲನದ ನಿರ್ದೇಶಕ ವಂ. ಗುರು ರೋಶನ್ ಡಿಕುನ್ಹಾ, ತಾಕೊಡೆ ಚರ್ಚಿನ ಧರ್ಮಗುರು ವಂ. ರೋಹನ್ ಲೋಬೊ ಬಲಿಪೂಜೆ ಅರ್ಪಿಸಿದರು.
*ಮೌಂಟ್ ಕಾಮೆ೯ಲ್ ಚಚ್೯ ಶಿತಾ೯ಡಿ ಇಲ್ಲಿ ತೆನೆ ಹಬ್ಬವನ್ನು ಆಚರಿಸಲಾಯಿತು.
ಧಮ೯ಗುರು ರೆ ಫಾ.ಹೆರಾಲ್ಡ್ ಮಸ್ಕರೇನಸ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಉಪಾಧ್ಯಕ್ಷರಾದ ಹೆರಿ ಡಿ'ಸಿಲ್ವ, ಕಾಯ೯ದಶಿ೯ ಜೆಸಿಂತಾ ರೊಡ್ರಿಗಸ್, ಸವ೯ ಆಯೋಗದ ಸಂಯೋಜಕರು ಜೋ ಪಿರೇರಾ ಉಪಸ್ಥಿತರಿದ್ದರು.
ಮೂಡುಬಿದಿರೆಯ ಕೊಪು೯ಸ್ ಕ್ರಿಸ್ತಿ, ಆಲಂಗಾರಿನ ಹೋಲಿ ರೋಸರಿ, ಪಾಲಡ್ಕದ ಸೈಂಟ್ ಇಗ್ನೇಷಿಯಸ್ ಲೊಯಲೋ,ಆನೆಗುಡ್ಡೆಯ ಸೈಂಟ್ ಫ್ರಾನ್ಸಿಸ್, ಬೆಳುವಾಯಿಯ ಸೈಂಟ್ ಮಾಟಿ೯ನ್ ದೇ ಪೊರೇಸ್ ಹೊಸಬೆಟ್ಟುವಿನ ಹೋಲಿ ಕ್ರಾಸ್, ಸಿದ್ಧಕಟ್ಟೆಯ ಸೈಂಟ್ ಫ್ಯಾಟ್ರಿಕ್ ಹಾಗೂ ವಾಮದ ಪದವಿನ ಇನ್ ಫೆಂಟ್ ಜೇಸಸ್ ಚಚ್೯ಗಳಲ್ಲಿ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.