ಎಸ್.ಎಲ್. ಬೈರಪ್ಪರ ನಿಧನಕ್ಕೆ ಕುಂಪಲ ಸಂತಾಪ
Wednesday, September 24, 2025
ಮಂಗಳೂರು: ಕನ್ನಡದ ಸಾಹಿತ್ಯ ಲೋಕವನ್ನು ಸಿರಿವಂತಗೊಳಿಸಿದ ಅದ್ಭುತ ಸಾಹಿತಿ. ಚುಂಬಕ ಶಕ್ತಿಯ ಬರವಣಿಗೆಯಲ್ಲಿ ಮೂಡಿ ಬಂದಿರುವ ಮಹಾನ್ ಕೃತಿಗಳಾದ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಪರ್ವ, ಆವರಣ, ಯಾನ ಇನ್ನೂ ಹಲವಾರು ಸಾಹಿತ್ಯಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಹಿತ್ಯಾಸಕ್ತರ ಮನಗೆದ್ದಿರುವ ಪದ್ಮಭೂಷಣ ಎಸ್.ಎಲ್. ಭೈರಪ್ಪರ ನಿಧನದಿಂದ ಸಾಹಿತ್ಯ ಕ್ಷೇತ್ರವು ಅಪರೂಪದ ಧ್ರುವತಾರೆಯನ್ನು ಕಳೆದುಕೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಂತಾಪವನ್ನು ವ್ಯಕ್ತಪಡಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.