ಮುಂದುವರೆದ ಮಹೇಶ್ ಶೆಟ್ಟಿ ತಿಮರೋಡಿ-ಚಿನ್ನಯ್ಯ ನಡುವಿನ ವಿಡಿಯೋ ತುಣುಕುಗಳ ಬಿಡುಗಡೆ
Wednesday, September 24, 2025
ಮಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ನಡುವಿನ ವಿಡಿಯೋ ತುಣುಕುಗಳ ಬಿಡುಗಡೆ ಮುಂದುವರಿದಿದೆ.
ಬುಧವಾರ ಜಾಲತಾಣಗಳಲ್ಲಿ ಬಿಡುಗಡೆಗೊಂಡ 15ನೇ ವಿಡಿಯೋ ತುಣುಕಿನಲ್ಲಿ ಚೆನ್ನೈ ಸ್ವಾಮೀಜಿ ಕನ್ಯಾಡಿಯಲ್ಲಿ ಜಾಗ ಖರೀದಿಸಿ ಬಳಿಕ ಮಾರಾಟ ಮಾಡಿದ್ದು, ಅಲ್ಲಿ ಕೂಡ ಸಾಕಷ್ಟು ಶವ ಹೂಳಿದ ಕತೆಯನ್ನು ಚಿನ್ನಯ್ಯ ಹೇಳಿದ್ದಾನೆ. ಅಲ್ಲದೆ ಆ್ಯಸಿಡ್ ಹಾಕಿ ಮಹಿಳೆಯನ್ನು ಸುಟ್ಟಿದ್ದಾರೆ. ಅನಾಥ ಶವಗಳನ್ನು ಹೂಳಿದ್ದೇವೆ ಇತ್ಯಾದಿ ಮಾತನ್ನು ಚಿನ್ನಯ್ಯ ಹೇಳಿರುವುದು ವಿಡಿಯೋದಲ್ಲಿದೆ.