ಎಂಎಸ್‌ಎಂಇ ಮೂಲಕ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶ: ಸ್ಪೀಕರ್ ಯು.ಟಿ. ಖಾದರ್
ಅವರು ಪ್ರೊಡಕ್ಟಿವಿಟಿ ಕೌನ್ಸಿಲ್ ಮಂಗಳೂರು, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಶನಿವಾರ ರೆಡ್‌ಕ್ರಾಸ್ ಪ್ರೇರಣ ಸಭಾಂಗಣದಲ್ಲಿ ಹಮ್ಮಿಕೊಂಡ ಎಂಪಿಸಿ ರೋಟರಿ ಕೋಸ್ಟಲ್ ಎಂಎಸ್‌ಎಂಇ ಸ್ಟಾರ್ ಅಫ್ ಕೌನ್ ಕ್ಲೇವ್-2025ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವ ಸಂಪನ್ಮೂಲ ಬಳಕೆಗೆ ಎಂಎಸ್ ಎಂಇ ಪೂರಕವಾದ ವೇದಿಕೆ. ಸರಕಾರದ ಸವಲತ್ತುಗಳನ್ನು ಬ್ಯಾಂಕ್‌ನ ಮೂಲಕ ಹೇಗೆ ಪಡೆದುಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಸಹಕಾರಿಯಾಗುತ್ತದೆ ಎಂದರು.
ಕರಾವಳಿಯಲ್ಲಿ ಬಹು ಭಾಷಾ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಇದರಿಂದ ದೇಶ ವಿದೇಶಗಳಲ್ಲಿ ಹೆಚ್ಚಿನ ಅವಕಾಶ ಪಡೆಯಲು ಸಾಧ್ಯ ಎಂದು ಯು.ಟಿ. ಖಾದರ್ ಸಲಹೆ ನೀಡಿದರು.
ಕರ್ಣಾಟಕ ಬ್ಯಾಂಕ್ ಲಿ.ನ ನಿರ್ದೇಶಕ ಜೀವನ್ ದಾಸ್ ನಾರಾಯಣ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಮಹಾಪ್ರಬಂಧಕ ಮಂಜುನಾಥ ಸಿಂಗೈ, ಆದಾಯ ತೆರಿಗೆ ಮಂಗಳೂರು ಆಯುಕ್ತ ರಂಗರಾಜನ್ ಉಪಸ್ಥತರಿದ್ದರು.
ಫಿಕ್ಕಿ ಬೆಂಗಳೂರು ಇದರ ಅಧ್ಯಕ್ಷ ಸಿ.ಎ. ಉಲ್ಲಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ವಿಕಾಸ ಕೋಟ್ಯಾನ್, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ ರಾಮರಾವ್, ಕಾರ್ಯದರ್ಶಿ ರವೀಂದ್ರ ರಾವ್, ರೋಟರಿ ಪಿಡಿಜೆ ಡಾ. ದೇವದಾಸ ರೈ ಉಪಸ್ಥಿತರಿದ್ದರು ಎಸ್.ಎಸ್. ಕಾಮತ್ ಸ್ವಾಗತಿಸಿದರು.