ಪೌರಾಣಿಕ ಹೆಸರನ್ನು ಮಕ್ಕಳಿಗೆ ನಾಮಕರಣ ಮಾಡುವುದರಿಂದ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬಹುದು: ಪೇಜಾವರ ಶ್ರೀ

ಪೌರಾಣಿಕ ಹೆಸರನ್ನು ಮಕ್ಕಳಿಗೆ ನಾಮಕರಣ ಮಾಡುವುದರಿಂದ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬಹುದು: ಪೇಜಾವರ ಶ್ರೀ


ಮಂಗಳೂರು: ಆಧುನಿಕ ಹೆಸರುಗಳನ್ನು ಇರಿಸುವ ಬದಲು, ಮಕ್ಕಳಿಗೆ ಪುರಾಣದ ಹೆಸರುಗಳನ್ನು ಇರಿಸುವ ಮೂಲಕ ಧಾರ್ಮಿಕ ಪ್ರಜ್ಞೆ ಮೂಡಿಸುವಂತಾಗಬೇಕೆಂದು ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಶ್ರೀ ಕ್ಷೇತ್ರ ಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಮಕ್ಕಳಿಗೆ ತಮ್ಮ ಹೆಸರಿನ ಹಿನ್ನೆಲೆ ಅರಿತುಕೊಳ್ಳುವ ಕುತೂಹಲ ಸೃಷ್ಟಿಸುವಂತೆ ಈ ಮೂಲಕ ಮಾಡಬಹುದು, ಅದಕ್ಕಾಗಿ ಇನ್ನು ಮುಂದೆ ಕೃಷ್ಣ, ರಾಮರಂತಹ ಹೆಸರಿರುವ ಮಕ್ಕಳನ್ನು ಆಹ್ವಾನಿಸಿ ಪುರಸ್ಕರಿಸುವ ಸ್ಪರ್ಧೆಯನ್ನು ಏರ್ಪಡಿಸುವಂತಾಗಲಿ ಎಂದು ಹಾರೈಸಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆ ಗೈದು ಸ್ವಾಗತಿಸಿದರು.

ಶ್ರೀ ಕ್ಷೇತ್ರ ಕದ್ರಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ಜೆ. ಶೆಟ್ಟಿ, ನೆರವು ರಾಘವೇಂದ್ರ ಶಾಸ್ತ್ರಿ, ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ರತ್ನಾಕರ್ ಜೈನ್, ಸುಧಾಕರ ರಾವ್ ಪೇಜಾವರ, ನವನೀತ ಶೆಟ್ಟಿ ಕದ್ರಿ, ಭುವನಾಭಿರಾಮ ಉಡುಪಿ, ಜನಾರ್ದನ ಹಂದೆ, ಶಶಿಪ್ರಭಾ ಐತಾಳ್, ಪೂರ್ಣಿಮಾ ರಾವ್ ಪೇಜಾವರ, ಬಿ. ವಿಜಯಲಕ್ಷ್ಮೀ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article