ಪೆನ್ಸಿಲ್ ಮಾರಾಟ ಮಾಡುವ ಬಾಲಕಿ ಮೊಗದಲ್ಲಿ ನಗು ಮೂಡಿಸಿದ ಯುವಕ: ವಿಡಿಯೋ ವೈರಲ್

ಪೆನ್ಸಿಲ್ ಮಾರಾಟ ಮಾಡುವ ಬಾಲಕಿ ಮೊಗದಲ್ಲಿ ನಗು ಮೂಡಿಸಿದ ಯುವಕ: ವಿಡಿಯೋ ವೈರಲ್


ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಯುವಕನೊಬ್ಬನಿಗೆ ರಸ್ತೆ ಬದಿಯಲ್ಲಿ ಪೆನ್ಸಿಲ್ ಮಾರಾಟ ಮಾಡುತ್ತಿರುವ ಬಾಲಕಿಯೊಬ್ಬಳು, ಅಣ್ಣಾ ನನಗೆ ಸೈಕಲ್ ಕೊಡಿಸು ಎಂದು ಕೇಳುತ್ತಿರುವ ವಿಡಿಯೋ ಇದಾಗಿದ್ದು, ಏ೧೯- ಡಿiಜeಡಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, ಸದ್ಯ ವೈರಲ್ ಆಗಿದೆ.

ರಸ್ತೆ ಬದಿಯಲ್ಲಿ ಪೆನ್ಸಿಲ್ ಮಾರಾಟ ಮಾಡುತ್ತಿದ್ದ ಬಾಲಕಿಯೊಬ್ಬಳು ಬೈಕ್‌ನಲ್ಲಿ ಬಂದ ಯುವಕನ ಹತ್ತಿರ ಅಣ್ಣಾ ನನಗೆ ಸೈಕಲ್ ಬೇಕು ಎಂದು ಕೇಳಿದ್ದಾಳೆ. ಈ ವೇಳೆ ಯುವಕ ನನ್ನ ಹತ್ತಿರ ನಿನಗೆ ಸೈಕಲ್ ಕೊಡಿಸುವಷ್ಟು ಹಣ ಇಲ್ಲ, ಆದರೆ ನಿನಗೆ ಒಂದು ಸ್ಕೂಲ್ ಬ್ಯಾಗ್ ಕೊಡಿಸುವೇ ಎಂದಿದ್ದಾನೆ,. ಅದಕ್ಕೆ ಬಾಲಕಿ ತನಗೆ ಬ್ಯಾಗ್, ಪೆನ್ನು ಪೆನ್ಸಿಲ್, ಕಂಪಾಸ್ ಬೇಕು ಎಂದು ಹೇಳಿದ್ದಾಳೆ. ಈ ವೇಳೆ ನೀನು ಇಲ್ಲೇ ನಿಂತಿರು, ಒಂದು ಗಂಟೆಯೊಳಗೆ ಬರುತ್ತೇನೆ ಎಂದು ಹೇಳಿದ್ದಾನೆ. ಈ ಪುಟ್ಟ ಹುಡುಗಿಯ ಬೇಡಿಕೆಗೆ ಸ್ಪಂದಿಸಿದ ಯುವಕನು ಆಕೆ ಹೇಳಿದ ಎಲ್ಲದ್ದನ್ನು ತಂದು ಕೊಟ್ಟಿದ್ದಾನೆ. ಈ ಬ್ಯಾಗ್, ಪೆನ್ನು ಪೆನ್ಸಿಲ್ ನೋಡಿದ ಪುಟಾಣಿ ಯೂ ನಗೆ ಬೀರಿದ್ದಾಳೆ. ಆಕೆಯ ಮೊಗದಲ್ಲಿ ನಗು ಮೂಡಿಸಿದ್ದಾನೆ. ತನಗೆ ಸೈಕಲ್ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ. 

ಆ ವೇಳೆಯಲ್ಲಿ ಅಷ್ಟು ದೊಡ್ಡ ಮೊತ್ತದ ಸೈಕಲ್ ಕೊಡಿಸಲು ಸಾಧ್ಯವಾಗದೇ ಬ್ಯಾಗ್ ಸೇರಿದಂತೆ ಇನ್ನಿತ್ತರ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಕೊಡಿಸಿ ಪುಟ್ಟ ಹುಡುಗಿಯ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಕೆಲಸ, ಹೀಗೆಯೇ ಮುಂದುವರೆಯಲಿ ಎಂದಿದ್ದಾರೆ. ಇನ್ನೊಬ್ಬರು ಪಾಪ ಸೈಕಲ್ ತೆಗೆಸಿಕೊಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮದು ತುಂಬಾ ಒಳ್ಳೆಯ ಮನಸ್ಸು, ನಿಮಗೆ ತೆಗೆಸಿ ಕೊಡುವ ಮನಸ್ಸಿದೆ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article