ಎಸ್‌ಐಟಿ ನೈತಿಕ ಸ್ಥೈರ್ಯ ಕುಗ್ಗಿಸುವ ಹನ್ನಾರ: ಪ್ರತಿಭಟನೆ ಎಚ್ಚರಿಕೆ

ಎಸ್‌ಐಟಿ ನೈತಿಕ ಸ್ಥೈರ್ಯ ಕುಗ್ಗಿಸುವ ಹನ್ನಾರ: ಪ್ರತಿಭಟನೆ ಎಚ್ಚರಿಕೆ


ಮಂಗಳೂರು: ವಿಶೇಷ ತನಿಖಾ ತಂಡದ (ಎಸ್‌ಐಟಿ) ನೈತಿಕ ಸ್ಥೈರ್ಯ ಕುಗ್ಗಿಸಲು ಹುನ್ನಾರ ನಡೆಯುತ್ತಿದ್ದು, ದುಷ್ಟ ಶಕ್ತಿಗಳ ಹುನ್ನಾರವನ್ನು ಮೆಟ್ಟಿ ನಿಲ್ಲಲು ಲಕ್ಷಾಂತರ ಜನರನ್ನು ಸೇರಿಸಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಎಚ್ಚರಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೌಜನ್ಯ ಹೋರಾಟ ಹಾಗೂ ಧರ್ಮಸ್ಥಳ ಶವ ಹೂಳಲಾಗಿದೆ ಎನ್ನಲಾದ  ಪ್ರಕರಣದಲ್ಲಿ ಎಸ್‌ಐಟಿ ಪಾರದರ್ಶಕ ತನಿಖೆ ನಡೆಸುತ್ತಿದೆ. ಎಸ್‌ಐಟಿ ತಂಡವನ್ನ ದುರ್ಬಲ ಮಾಡುವ ಪ್ರಯತ್ನ ನಡೆಯುತ್ತಿದೆ. ಎಸ್‌ಐಟಿ ಒಳ್ಳೆಯ ತನಿಖೆ ಮಾಡುತ್ತಿದೆ. ಆದರೆ ಅವರ ಮನಸನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಎಸ್‌ಐಟಿ ಗೆ ಶಕ್ತಿ ತುಂಬಲು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ. ಪ್ರತಿಭಟನೆಯ ಸಮಯ ದಿನವನ್ನು ನಿಗದಿ ಮಾಡುತ್ತೇವ ಎಂದರು. 

ಮಹಾತ್ಮ ಗಾಂಧಿಯವರ ಶಾಂತಿಯ ಮಂತ್ರದ ಪ್ರೇರಣೆಯಡಿ ಮೌನ ಪ್ರತಿಭಟನೆ ಮಾಡಲಿದ್ದೇವೆ. ಬೆಳ್ತಂಗಡಿ ತಾಲೂಕಿನಲ್ಲಿ ಲಕ್ಷಾಂತರ ಜನ ಸೇರಿ ಮೌನ ಪ್ರತಿಭಟನೆ ಮಾಡಲಿದ್ದೇವೆ. ಸೆ.೧೬ನೇ ಸಂಕ್ರಮಣ ದಿವಸ ಎಲ್ಲಾ ಮಠ ಮಂದಿರ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಎಸ್‌ಐಟಿ ತಂಡಕ್ಕೆ ಸತ್ಯ ಹೊರ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡುತ್ತೆವೆ ಎಂದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article