ಹೊಂಡಗಳಿಗೆ ಮುಕ್ತಿ ನೀಡಲು ರಸ್ತೆಗಿಳಿದ ಸಾವ೯ಜನಿಕರು

ಹೊಂಡಗಳಿಗೆ ಮುಕ್ತಿ ನೀಡಲು ರಸ್ತೆಗಿಳಿದ ಸಾವ೯ಜನಿಕರು


ಮೂಡುಬಿದಿರೆ: ಅಲ್ಲಲ್ಲಿ ಬಿದ್ದಿರುವ ಆಳೆತ್ತರದ ಹೊಂಡಗಳಿಂದ ವಾಹನ ಸಂಚಾರ ಮತ್ತು ಪಾದಾಚಾರಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿರುವುದನ್ನು ಗಮನಿಸಿರುವ ರಿಕ್ಷಾ ಚಾಲಕರು ಮತ್ತು ಸಾವ೯ಜನಿಕರು ತಾವೇ ರಸ್ತೆಗಿಳಿದು ಹೊಂಡಗಳಿಗೆ ಮುಕ್ತಿ ನೀಡಿದ ಉತ್ತಮ ಕಾಯ೯ ಮೂಡುಬಿದಿರೆ ಮಾಂಟ್ರಾಡಿಯಲ್ಲಿ ನಡೆದಿದೆ.


ಮೂಡುಬಿದಿರೆ- ಹೊಸ್ಮಾರು ಸಂಪಕಿ೯ಸುವ ಲೋಕೋಪಯೋಗಿ ರಸ್ತೆಯ ಮಾಂಟ್ರಾಡಿ-ಕೈಕಂಬ ಬಳಿ ಆಳೆತ್ತರದ ಹೊಂಡಗಳಾಗಿದ್ದು ಇದರಿಂದಾಗಿ ಮೂನಾ೯ಲ್ಕು ಜನ ವಾಹನಗಳಿಂದ ಬಿದ್ದು ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಆಗ  ಅಲ್ಲಿನ ಆಟೋ ರಿಕ್ಷಾದವರು ಮಣ್ಣು ತುಂಬಿಸಿ ಸರಿ ಪಡಿಸಿದ್ದರು. 


ಆದರೆ ನಂತರ ಸುರಿದ ಮಳೆಯ ಪರಿಣಾಮವಾಗಿ ಮತ್ತೆ ದೊಡ್ಡ ದೊಡ್ಡ ಹೊಂಡಗಳು ಮರುಕಳಿಸಿದ್ದವು. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಇದನ್ನು ಅರಿತ ನಾಗರಿಕರು ಮತ್ತು ಅಟೋ ರಿಕ್ಷಾದವರು ಮತ್ತೊಮ್ಮೆ ಭಾನುವಾರ ಮಣ್ಣು ತುಂಬಿಸಿ ಸಂಭವ್ಯಾ ಅಪಾಯ ಅಗುದನ್ನು ನಿವಾರಿಸಿ ಹೊಂಡಗಳಿಗೆ ಮುಕ್ತಿ ನೀಡಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article