ಧರ್ಮಸ್ಥಳ ಎಸ್‌ಐಟಿ ತನಿಖೆ-ಕಾಂಗ್ರೆಸ್ ಸತ್ಯದ ಪರ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
ಮಂಗಳೂರಿನಲ್ಲಿ ಟಿಎಂಎ ಪೈ ಕನ್ವೆನ್ಶನಲ್ ಸೆಂಟರ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಬುಧವಾರ ಆಗಮಿಸಿದ್ದ ಅವರನ್ನು ಸುದ್ದಿಗಾರರು ಎಸ್‌ಐಟಿ ತನಿಖೆ ಕುರಿತಂತೆ ಪ್ರಶ್ನಿಸಿದಾಗ ಈ ಸ್ಪಷ್ಟನೆ ನೀಡಿದರು.
ಪ್ರಕರಣವನ್ನು ತನಿಖೆ ಮಾಡಲು ಎಸ್‌ಐಟಿ ಮಾಡಿದ್ದು ನಾವೇ ಅಲ್ಲವೇ. ಹಿಂದಿನ ಸರಕಾರ ಇತ್ತಲ್ಲ ಅವರು ಯಾಕೆ ಮಾಡಿಲ್ಲ. ಬಿಜೆಪಿಯವರು ಧರ್ಮಸ್ಥಳ ಚಲೋ ಮಾಡಿದ್ದು ಧರ್ಮಾಧಿಕಾರಿಯವರ ಮರ್ಯಾದೆ ಉಳಿಸಲೆಂದು ತಾನೇ? ವೇದಿಕೆ ಹತ್ತಿ ಧರ್ಮಾಽಕಾರಿ ಪರ ವಹಿಸಿದ್ದರು. ವೇದಿಕೆ ಇಳಿದು ಸೌಜನ್ಯ ಮನೆಗೆ ಹೋಗಿದ್ದರಲ್ಲ. ಆಗ ಯಾರ ಪರವಾಗಿ ಹೋಗಿದ್ದು? ಅಲ್ಲಿ ಸೌಜನ್ಯ ಸಂಬಂಧಿಕರು ಯಾರ ಹೆಸರು ಉಲ್ಲೇಖಿಸಿದ್ದು? ಅದೇ ಬಿಜೆಪಿ ನಾಯಕರು ಮಾಧ್ಯಮ ಎದುರು ಬಂದು ಸೌಜನ್ಯ ಹೋರಾಟದಲ್ಲಿ ಮತ್ತೆ ಸುಪ್ರೀಂ ಕೋರ್ಟ್ ಹೋಗಬೇಕಾದರೆ ಅವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಅನ್ನುತ್ತಾರೆ. ಈ ರೀತಿಯಾಗಿ ವೇದಿಕೆ ಇಳಿದಾಗ ವಿರುದ್ಧ, ಹತ್ತಿದಾಗ ಧರ್ಮಾಽಕಾರಿ ಪರ ಏನು ನಾಟಕ ಮಾಡುತ್ತಿದ್ದಾರೆ ಬಿಜೆಪಿಯವರು. ಎರಡೆರಡು ದೋಣಿಯಲ್ಲಿ ಕಾಲಿಟ್ಟು ಹೋಗುವ ಬಿಜೆಪಿಯವರನ್ನು ಬಿಟ್ಟು ನಮ್ಮಲ್ಲಿ ಪ್ರಶ್ನೆ ಕೇಳಿದರೇನು ಪ್ರಯೋಜನ ಎಂದವರು ತರಾಟೆಗೈದರು.
ಯಾರನ್ನಾದರೂ ಗಡಿಪಾರು ಮಾಡಬೇಕೆಂದರೆ ಸರಕಾರದ ಮನಸ್ಸಿಗೆ ಬಂದಂತೆ ಮಾಡಲು ಆಗುವುದಿಲ್ಲ. ಕೆಲವೊಂದು ಮಾನದಂಡಗಳಿರುತ್ತವೆ. ಕೋರ್ಟ್‌ಗೆ ಹೋಗಿ, ಅಲ್ಲಿಯೂ ಚರ್ಚೆ ಆಗಿ ಮಾಡಲಾಗುತ್ತದೆ. ಕಾರಣವಿಲ್ಲದೆ ಮಾಡಲು ಆಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.