
ಮಲಯಾಳಿ ಬಿಲ್ಲವರು ತೀಯಾ ಎಂದೇ ನಮೂದಿಸಿ
ಮಂಗಳೂರು: ರಾಜ್ಯ ಸರ್ಕಾರದಿಂದ ಸೆ.22 ರಿಂದ ಅ.9 ರವರೆಗೆ ಸಾಮಾಜಿಕ, ಶೈಕಣಿಕ ಹಾಗೂ ಜಾತಿ ಜನಗಣತಿ ಸಮೀಕ್ಷೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮನೆಗೆ ಬರುವ ಆಶಾ ಕಾರ್ಯಕರ್ತೆಯರು, ಶಿಕ್ಷಕರಿಗೆ 9ನೇ ಕಾಲಂ ಜಾತಿಯಲ್ಲಿ ತೀಯಾ ಎಂದು ನಮೂದಿಸಿ ಎಂದು ಭಾರತೀಯ ತೀಯಾ ಸಮಾಜದ ಕೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದರು.
ಅವರು ಇಂದು ನಗರದ ಭಗವತಿ ದೇವಸ್ಥಾನದ ಸಭಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರಾಜ್ಯದಲ್ಲಿ 4 ಲಕ್ಷ ಜನರು ತೀಯಾ ಸಮುದಾಯದಲ್ಲಿ ಇದ್ದು, ರಾಜ್ಯದ ಹಲವು ಭಾಗಗಳಲ್ಲಿ ಇದ್ದಾರೆ. ಅವರು ಮಲಯಾಳಿ ಬಿಲ್ಲವ, ಬೆಳ್ಚಡ್ ಎಂದು ಕೂಡ ಗುರಿತಿಸಿಕೊಂಡು, ಪ್ರಮಾಣ ಪತ್ರದಲ್ಲಿ ಹಾಗೆ ಇದ್ದಲ್ಲಿ, ಅಂತವರು 11ನೇ ಕಾಲಂ ಉಪಜಾತಿಯಲ್ಲಿ ತೀಯಾ, ಮಳಯಾಳಿ ಬಿಲ್ಲವ, ಬೆಳ್ಚಡ್ ಎಂದು ಗುರುತಿಸಿ, ಆದರೆ ಜಾತಿಯ ಹೆಸರಿಗೆ ತೀಯಾ ಎಂದೇ ಗುರುತಿಸಿ ಎಂದು ತಿಳಿಸಿದರು.
ನಮ್ಮ ಸಮುದಾಯದಲ್ಲಿ ಜನ ಸಂಖ್ಯೆ ಕಡಿಮೆ ಇದೆ ಎಂದು ನಾವು ಹಿಂದುಳಿದ್ದಿದ್ದೇವೆ. ನಾವು ಎಷ್ಟು ಜನರಿದ್ದೇವೆ ಎಂದು ತೋರಿಸಲು ಕಡ್ಡಾಯವಾಗಿ ತೀಯಾ ಎಂದೇ ನಮೂದಿಸಿ, ಇನ್ನೂ ಕೆಲವರು ಬಿಲ್ಲವ ಎಂದು ನಮೂದಿಸಿದ್ದಾರೆ. ಬಿಲ್ಲವರು ಎಂದರೆ ಪೂಜಾರಿಗಳು ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದುದರಿಂದ ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಸರಿಯಾಗಿ ದಾಖಲೆಗಳನ್ನು ನೀಡುವಂತೆ ತಿಳಿಸಿದರು.
ಸಮುದಾಯದ ಪ್ರಮುಖರಾದ ಗಣೇಶ್ ಕುಂಟಲ್ಪಾಡಿ, ಪ್ರೇಮ್ ಚಂದ್, ಜಯಂತ್ ಕೊಂಡಾಣ, ಸುರೇಶ್ ಭಟ್ನನಗರ, ದಿನೇಶ್ ಕುಂಪಲ, ಉಮೇಶ್ ಬೆಂಜನಪದವು, ರಾಕೇಶ್ ಕುಮಾರ್, ರೋಹಿತಾಶ್ವ ಕುಡುಪು, ಉಮೇಶ್ ಕುಮಾರ್, ರಾಜ್‌ಗೋಪಾಲ್, ಸುಧೀರ್, ಗಣೇಶ್, ಜಯಂತ್, ಸರಳ, ಸುಕೇತ್ ಮತ್ತಿತರರು ಉಪಸ್ಥಿತರಿದ್ದರು.