
ತೆಂಕಮಿಜಾರು ಕರಿಕುಮೇರಿನಲ್ಲಿ ಆರೋಗ್ಯ ಮಾಹಿತಿ ಕಾಯ೯ಕ್ರಮ
Friday, September 19, 2025
ಮೂಡುಬಿದಿರೆ: ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದಂಗವಾಗಿ ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯ ಕರಿಕುಮೇರು ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾಯ೯ಕ್ರಮ ನಡೆಯಿತು.
ತೆಂಕಮಿಜಾರು ಗ್ರಾ. ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸಮುದಾಯ ಆರೋಗ್ಯಾಧಿಕಾರಿ ದಿವ್ಯಾ ಡಿ’ಸೋಜ ಮಾಹಿತಿ ನೀಡಿದರು. ನಂತರ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಲಾಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದಿಶಾ, ವಾಡ್೯ ಮೆಂಬರ್ ಮಹೇಶ್, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆ, ಗ್ರಾಮಸ್ಥರು ಉಪಸ್ಥಿತರಿದ್ದರು.