ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ಧೆ

ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ಧೆ


ಮಂಗಳೂರು: ಶ್ರೀ ಪೊನ್ನಗಿರಿ ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿ ಕುತ್ತೆತ್ತೂರು-ಸೂರಿಂಜೆ ಇದರ ಆಶ್ರಯದಲ್ಲಿ 75ನೇ ಭಜನಾ ಮಂಗಲೋತ್ಸವದ ಪ್ರಯುಕ್ತ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಆಹ್ವಾನಿತ ಭಜನಾ ತಂಡಗಳಿಂದ ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ಧೆ ನ.9 ರಂದು ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಬೆಳಗ್ಗೆ 8.30 ರಿಂದ ನಡೆಯಲಿದೆ.

ವಿಭಾಗ ಒಂದರಲ್ಲಿ ಬಾಲಕ-ಬಾಲಕಿಯರಿಗೆ 15 ವರ್ಷದ ಒಳಗಿನ ವಿಭಾಗ ಎರಡರಲ್ಲಿ ಮಹಿಳೆಯರಿಗೆ-ಮುಕ್ತ ವಿಭಾಗ ಇದೆ.

ಸ್ಪರ್ಧಾ ನಿಬಂಧನೆಗಳು: 

ದಾಸರ ಕೀರ್ತನೆಗಳನ್ನು ಮಾತ್ರ ಹಾಡುವುದು ಮತ್ತು ಅಂಕಿತನಾಮ ಕಡ್ಡಾಯ ಆಗಿದೆ. ಪ್ರತಿ ವಿಭಾಗದಲ್ಲಿ 12 ತಂಡಗಳಿಗೆ ಮಾತ್ರ ಅವಕಾಶ ಇದೆ. ಒಬ್ಬ ಸದಸ್ಯ ಒಂದು ತಂಡದಲ್ಲಿ ಮಾತ್ರ ಭಾಗವಹಿಸುವುದು (ಹಿಮ್ಮೇಳ ಸೇರಿ), ಒಬ್ಬ ಭಜಕರು ಒಂದೇ ಹಾಡು ಹಾಡ ಬೇಕು. ತಂಡದಲ್ಲಿ ಸದಸ್ಯರ ಮಿತಿ ಹಿಮ್ಮೇಳ ಸೇರಿ ಕನಿಷ್ಠ 10 ಹಾಗೂ ಗರಿಷ್ಠ 16 ಇರಬೇಕು. 

ಹಿಮ್ಮೇಳದಲ್ಲಿ ತಬಲ, ಹಾರ್ಮೋನಿಯಂ, ಕಂಜೀರಾ ಹಾಗೂ ತಾಳ ಮಾತ್ರ ಬಳಕೆ ಮಾಡಬಹುದು (ಕಡ್ಡಾಯವಲ್ಲ) ಹಿಮ್ಮೇಳ ಸಾಹಿತ್ಯಗಳನ್ನು ತಂಡದವರೇ ತರಬೇಕು. ವಯಸ್ಸಿನ ಮಿತಿ ಹಿಮ್ಮೇಳದವರಿಗೂ ಅನ್ವಯಿಸುತ್ತದೆ. ಪ್ರಸ್ತುತಿ ಅವಧಿ 12 ನಿಮಿಷ ಮತ್ತು ವಿಮರ್ಶೆ/ಪ್ರಶ್ನಿತರ ಗರಿಷ್ಠ 3 ನಿಮಿಷ ಹೀಗೆ ಪ್ರತಿ ತಂಡಕ್ಕೆ 15 ಸಮಯಾವಕಾಶ ಬಳಿಕ 2 ನಿಮಿಷದ ಮಧ್ಯಂತರ ಇರುತ್ತದೆ. 

ಭಜನೆಯ ಆರಂಭ ಮತ್ತು ಅಂತ್ಯ, ಸಾಂಪ್ರದಾಯಿಕ ಶೈಲಿ, ಹಾಡಿನ ಗುಣಮಟ್ಟ, ರಾಗ-ತಾಳ-ಲಯ, ಕುಣಿತದ ಸಂಯೋಜನೆ, ತಂಡದ ಕ್ರೀಯಾಶೀಲತೆ, ಸಮವಸ್ತ್ರ, ಪ್ರಶೋತ್ತರ ಇತ್ಯಾದಿ ಸಮಗ್ರ ಅಂಶಗಳನ್ನು ತೀರ್ಪುಗಾರಿಕೆಯಲ್ಲಿ ಪರಿಗಣಿಸಲಾಗುವುದು. ಭಾಗವಹಿಸುವ ಪ್ರತಿ ತಂಡಕ್ಕೆ ಗೌರವ ಧನ ನೀಡಲಾಗುವುದು (ವಿಜೇತ ತಂಡ ಹೊರತು ಪಡಿಸಿ)

ಭಾಗವಹಿಸುವ ತಂಡಗಳ ನೋಂದಾವಣೆಗೆ ಕೊನೆಯ ದಿನಾಂಕ: 31-10-2025 ಆಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಸ್ಪರ್ಧಾ ದಿನದಂದು ಸ್ಪರ್ಧಾ ಸ್ಥಾನದಲ್ಲಿ ಬೆಳಗ್ಗೆ 8.30 ರ ಮುಂಚಿತವಾಗಿ ಹಾಜರಾತಿಯನ್ನು ದೃಡೀಕರಿಸಿ ಕ್ರಮ ಸಂಖ್ಯೆ ಆಯ್ಕೆಯಲ್ಲಿ ಪಾಲ್ಗೊಳ್ಳಬೇಕು. ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ ಸಾಂಧರ್ಭಿಕ ಬದಲಾವಣೆಗಳಿಗೆ ತಂಡಗಳು ಸಹಕರಿಸಬೇಕಾಗಿದೆ., ನೋಂದಣಿ ಮತ್ತಿತರ ವಿವರಗಳಿಗೆ ಮೊ. 9739314285-8884413517 ಸಂಪರ್ಕಿಸಬಹುದಾಗಿದೆ.

ಸಂಜೆ 5 ಗಂಟೆಯಿಂದ ‘ನಲಿದರೆ ಒಲಿವ’ ನೃತ್ಯ ಭಜನಾ ಸಂಭ್ರಮ ನಡೆಯಲಿದೆ ಎಂದು ಶ್ರೀ ಪೊನ್ನಗಿರಿ ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article