ಮುಂದಿನ ಬಜೆಟ್ನಲ್ಲಿ ಮುಡಿಪು ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಬಸ್, ಲಾರಿ ವ್ಯವಸ್ಥೆ: ರಾಮಲಿಂಗಾ ರೆಡ್ಡಿ
Thursday, September 25, 2025
ಮಂಗಳೂರು: ಮುಡಿಪು ವಾಹನ ಚಾಲನಾ ತರಬೇತಿ ಕೇಂದ್ರದ ಪ್ರಿನ್ಸಿಪಾಲ್ ತರಬೇತಿಗಾಗಿ ಒಂದು ಬಸ್ ಅಥವಾ ಲಾರಿ ಕೇಳಿದ್ದಾರೆ. ಮುಂದಿನ ಬಜೆಟ್ನಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಆರ್ಟಿಒ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಮುಡಿಪು ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ನಾನು ಭೇಟಿ ನೀಡಿದ್ದೇನೆ. ಪ್ರತಿದಿನ ಸರಾಸರಿ 50ರಷ್ಟು ಮಂದಿ ತರಬೇತಿ ಪಡೆಯಲು ಬರುತ್ತಿದ್ದಾರೆ. 50ಮಂದಿಯ ಹಾಸ್ಟೆಲ್ ಇದ್ದರೂ, ಬಳಕೆಯಾಗುತ್ತಿಲ್ಲ. ಮುಂದೆ ರಾಜ್ಯದ ಯಾವುದೇ ಭಾಗದ ಜನರು ಬಂದು ಉಳಿದು ತರಬೇತಿ ಪಡೆಯಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ಕೇಂದ್ರ ಸರಕಾರ ರಾಜ್ಯಗಳಿಗೆ ಇಲೆಕ್ಟ್ರಿಕ್ ಬಸ್ಗಳನ್ನು ನೀಡಲಿದ್ದು, ಇದರ ಟೆಂಡರ್ ಮತ್ತಿತರ ಪ್ರಕ್ರಿಯೆ ನಡೆಯಲು ಇನ್ನೂ ಸುಮಾರು ಆರು ತಿಂಗಳು ಬೇಕಾಗಬಹುದು. ಮಂಗಳೂರಿನಲ್ಲಿ ಇಲೆಕ್ಟ್ರಿಕ್ ಬಸ್ಗಳ ಡಿಪೋ ಸ್ಥಾಪನೆಗೆ ಜಾಗ ಗುರುತಿಸಲು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಎ.ಎಂ., ಸಹಾಯಕ ಆಯುಕ್ತ ಸಿ.ಮಲ್ಲಿಕಾರ್ಜುನ, ಶಿವಮೊಗ್ಗ ಜಂಟಿ ಆಯುಕ್ತ ಭೀಮನಗೌಡ ಪಾಟೀಲ್, ಮಂಗಳೂರು ಸಾರಿಗೆ ಅಕಾರಿ ಶ್ರೀಧರ ಮಲ್ಲಾಡ್ ಉಪಸ್ಥಿತರಿದ್ದರು.