ರಾಜ್ಯಮಟ್ಟದ ದಸರಾ ಬ್ಯಾಡ್ಮಿಂಟನ್ ದ.ಕ. ಜಿಲ್ಲೆಗೆ ಪ್ರಶಸ್ತಿ
Friday, September 26, 2025
ಮಂಗಳೂರು: ಮೈಸೂರಿನಲ್ಲಿ ಸೆ.22 ರಿಂದ 25 ರವರೆಗೆ ನಡೆದ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಪ್ರಥಮ ಹಾಗೂ ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡಿದೆ.
ಅದಿತಿ ಆಚಾರ್ಯ, ನಿಧಿ ಎಂ.ಎಸ್, ಬಿಂದುಶ್ರೀ, ಅಶುಲಿನ್ ಸುಝನ್, ಮಹಿಳೆಯರ ವಿಭಾಗದಲ್ಲಿ ಹಾಗೂ ಶರಸ್ ಪ್ರಭು, ಪ್ರಮೋದ್ ಕೆ.ಎಂ, ಚೇತನ್ ಸುವರ್ಣ, ಯಜ್ಞೆಶ್ ಕಾಂತಿಲ, ಪುರುಷರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.
