ಮೂಲತ್ವ ಫೌಂಡೇಶನ್-ಮುತ್ತೊಟ್ ಫೈನಾನ್ಸ್ ಸಹಯೋಗದಲ್ಲಿ ಸ್ಥನ್ಯಪಾನ ಕೊಠಡಿ ಹಸ್ತಾಂತರ
Tuesday, September 2, 2025
ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಮುತ್ತೊಟ್ ಫೈನಾನ್ಸ್ ಲಿಮಿಟೆಡ್ ಇವರ ಜಂಟಿ ಆಶಯದಲ್ಲಿ ಕೂಳೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರನೇ ಸ್ಥನ್ಯಪಾನ ಕೊಠಡಿಯನ್ನು ಮುತ್ತೊಟ್ ಫೈನಾನ್ಸಿನ ರೀಜನಲ್ ಮೆನೇಜರ್ ಪ್ರಶಾಂತ್ ನಾಯ್ಕ ಅವರು ಉದ್ಘಾಟಿಸಿದರು.
ಸ್ಥನ್ಯಪಾನ ಕೊಠಡಿಯನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕುಳೂರು ಇವರಿಗೆ ಹಸ್ತಾಂತರಿಸಿ ಮಾತನಾಡಿದ ಮುತ್ತೂಟ್ ಫೈನಾನ್ಸಿನ ರೀಜನಲ್ ಮೆನೇಜರ್ ಪ್ರಶಾಂತ್ ನಾಯ್ಕ, ಈ ಸ್ಥನ್ಯಪಾನ ಕೊಠಡಿಯು ತಾಯಂದಿರಿಗೆ ಅತಿ ಮುಖ್ಯ, ಡಾ. ರಾಜೇಶ್ ಇವರು ಮೂಲತ್ವ ಫೌಂಡೇಶನ್ ಹಾಗೂ ಮುತೋಟ್ ಫೈನಾನ್ಸ್ ಅವರ ಸಮಾಜಮುಖಿ ಕೆಲಸ ಶ್ಲಾಗಣೀಯ ಎಂದರು.
ಮುತ್ತೊಟ್ಟು ಫೈನಾನ್ಸ್ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೇನೋಯ್, ಮುತ್ತೊಟ್ಟು ಫೈನಾನ್ಸ್ ಕೊಟ್ಟಾರ ಬ್ರಾಂಚ್ ಮ್ಯಾನೇಜರ್ ಆಶಾಲತಾ ಅಂಚನ್, ಡಾ. ಚೈತ್ರಾ, ಗೌತಮ್, ಪ್ರವೀಣ್ ಫ್ರಾಂಕ್ ಮುತೋಟ್ ಫೈನಾನ್ಸ್, ಮೂಲತ್ವ ಫೌಂಡೇಶನ್‌ನ ಟ್ರಸ್ಟಿ ಕಲ್ಪನಾ ಕೋಟ್ಯಾನ್, ಅಕ್ಷತಾ ಕದ್ರಿ ಉಪಸ್ಥಿತರಿದ್ದರು.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್ ಸ್ವಾಗತಿಸಿದರು. ಮುತ್ತೊಟ್ಟು ಫೈನಾನ್ಸ್ ಸಿಎಸ್‌ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಪ್ರಾಸ್ತವಿಸಿದರು. ಮೂಲತ್ವ ಫೌಂಡೇಶನ್‌ನ ಟ್ರಸ್ಟಿ ಶೈನೀ ಮೂಲತ್ವ ವಂದಿಸಿದರು.