ಉದ್ಯಮಿ ನಂದ ಕುಮಾರ್ ಕುಡ್ವರಿಗೆ ಸಮಾಜ ಮಂದಿರ ಪುರಸ್ಕಾರ-2025

ಉದ್ಯಮಿ ನಂದ ಕುಮಾರ್ ಕುಡ್ವರಿಗೆ ಸಮಾಜ ಮಂದಿರ ಪುರಸ್ಕಾರ-2025


ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ) ವತಿಯಿಂದ ಜರಗಲಿರುವ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಈ ಬಾರಿ ಉದ್ಯಮಿ, ಧಾರ್ಮಿಕ ನೇತಾರ ನವಮಿ ಸಮೂಹ ಸಂಸ್ಥೆಗಳ ನಂದ ಕುಮಾರ್ ಆರ್. ಕುಡ್ವ ಅವರಿಗೆ ಸಮಾಜ ಮಂದಿರ ಪುರಸ್ಕಾರ 2025 ನೀಡಿ ಗೌರವಿಸಲಾಗುವುದು ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದ್ಧಾರೆ.

ಸೆ 22ರಿಂದ 26ರವರೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಪ್ರತೀ ದಿನ ಸಂಜೆ 7ರಿಂದ ಸಾಹಿತ್ಯ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಉತ್ಸವವನ್ನು ಉದ್ಘಾಟಿಸಲಿದ್ಧಾರೆ.

ಮೂಡುಬಿದಿರೆ ಬೆಳುವಾಯಿ ಮೂಲದ ಉದ್ಯಮಿ ನಂದ ಕುಮಾರ್ ಆರ್. ಕುಡ್ವ ಮುಂಬೈನಲ್ಲಿ ತನ್ನ ತಂದೆ ಆರಂಭಿಸಿದ್ದ ಬಟಾಟ ವಡಾ ವ್ಯವಹಾರವನ್ನು ಇಂದಿಗೂ ಬ್ರಾಂಡ್ ಫುಡ್ ಆಗಿ ಬೆಳೆಸಿದ್ದಾರೆ. ಎಂಭತ್ತರ ದಶಕದಲ್ಲಿ ಹುಟ್ಟೂರು ಮೂಡುಬಿದಿರೆಯ ಅಭಿವೃದ್ಧಿಗೆ ಹೊಟೆಲ್, ಕಾರ್ಗೊ ಸರ್ವಿಸ್, ಲಕ್ಸುರಿ ಬಸ್ಸುಗಳು, ಕಾರ್ಗೊ, ಡೆಕೋರೇಟರ್ಸ್, ಲಾಡ್ಜಿಂಗ್, ಸಭಾಭವನ, ವೀಡಿಯೋ ಥಿಯೇಟರ್, ಸೂಪರ್ ಮಾರ್ಕೆಟ್, ಪೆಟ್ರೋ ಪಂಪ್, ವೆಜ್ ರೆಸ್ಟೊ ಹೀಗೆ ಸಾಲು ಸಾಲು ನವಮಿ ಬಳಗದ ಉದ್ಯಮಗಳ ಮೂಲಕ ಹಲವು ಕುಟುಂಬಗಳಿಗೆ ಉದ್ಯೋಗದಾತರಾಗಿದ್ದಾರೆ. ಧಾರ್ಮಿಕವಾಗಿಯೂ ಶ್ರೀ ಹರಿ ಗುರು ಸೇವೆಯಲ್ಲಿ ಪ್ರಚಾರ ಬಯಸದೇ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ತವರು ನೆಲಕ್ಕೆ ಅವರ ಕೊಡುಗೆ ಮತ್ತು ಧಾರ್ಮಿಕ, ವಾಣಿಜ್ಯ ರಂಗದಲ್ಲಿ ಅವರ ಅನನ್ಯ ಕೊಡುಗೆ, ಸರ್ವಾಂಗೀಣ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಸಮಾಜ ಮಂದಿರ ಪುರಸ್ಕಾರ 2025 ನೀಡಲಾಗುತ್ತಿದೆ. ಸೆ 22ರಂದು ಸಂಜೆ 7ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಮಾಜ ಮಂದಿರ ಗೌರವ 2025:

ಮೂಡುಬಿದಿರೆಯ ಅಭಿವೃದ್ಧಿಯಲ್ಲಿ ತಮ್ಮದೇ ವಿಶಿಷ್ಠ ಕೊಡುಗೆಗಳ ಮೂಲಕ ಗುರುತಿಸಿಕೊಂಡಿರುವ ಸಾಧಕರ ಪೈಕಿ ವರ್ಷವೂ ದಸರಾ ಉತ್ಸವದಲ್ಲಿ 18 ಮಂದಿ ಸಾಧಕರನ್ನು ಸಮಾಜ ಮಂದಿರ ಪುರಸ್ಕಾರದೊಂದಿಗೆ ಗೌರವಿಸಲಾಗುತ್ತಿದೆ. ಐದು ದಿನಗಳ ಉತ್ಸವದ ಅವಧಿಯಲ್ಲಿ ಹಂತ ಹಂತವಾಗಿ ಸಾಧಕರನ್ನು ಗೌರವಿಸಲಾಗುವುದು. ಸಮಾಜ ಮಂದಿರ ಗೌರವ 2025 ಕ್ಕೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.

ವೇ.ಮೂ. ಎಂ. ಹರೀಶ್ ಭಟ್ (ಧಾರ್ಮಿಕ) ಶ್ರೀಮತಿ ಆಡ್ಲಿನ್ ಜೆ. ಜತನ್ನ (ಶಿಕ್ಷಣ) ಶ್ರೀಮತಿ ಗೌರಾ ಗೋವರ್ಧನ್ (ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್ (ಆಹಾರ ಉದ್ಯಮ) ಪಿ. ರಾಜಾರಾಮ ಭಟ್ (ಸಾಹಿತ್ಯ ಸೇವೆ) ಡಾ. ರೇವತಿ ಭಟ್ (ಆರೋಗ್ಯ) ರವಿ ಕೋಟ್ಯಾನ್ (ಛಾಯಾಗ್ರಹಣ) ಸೀತಾರಾಮ ಶೆಟ್ಟಿ ತೋಡಾರು (ವೇದಿಕೆ ವಿನ್ಯಾಸ) ಯಶವಂತ ಎಂ.ಜಿ. (ಸಂಗೀತ) ಶ್ರೀ ರಾಜೇಶ್ ಆರ್. ಶ್ಯಾನುಭಾಗ್ (ಛಾಯಾಗ್ರಹಣ) ಶ್ರೀ ತಿಲಕ್ ಕುಲಾಲ್ (ಚಿತ್ರ ಕಲೆ) ಅಶ್ರಫ್ ವಾಲ್ಪಾಡಿ (ಕಲೆ, ಪತ್ರಿಕೋದ್ಯಮ) ,ಹೆರಾಲ್ಡ್ ತಾವೋ (ಸಂಗೀತ) ಪ್ರಕಾಶ್ ಅಮೀನ್ (ಯೋಗ ಸಂಸ್ಕೃತಿ) ಶ್ರೀ ದಾಮೋದರ ಡಿ.ಸಪಲಿಗ (ಸಮುದಾಯ ಸೇವೆ ) ದಿನೇಶ್ ಪೂಜಾರಿ (ಸಮುದಾಯ ಸೇವೆ) ರಾಜೇಶ್ ಒಂಟಿಕಟ್ಟೆ (ಕಲೆ) ಕಿರಣ್ ಕುಮಾರ್ (ಶಿಕ್ಷಣ)

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article