
ಶಿರ್ತಾಡಿ ಉಪಕೇಂದ್ರಕ್ಕೆ ಶೀಘ್ರ ಟ್ರಾನ್ಸಫಾರ್ಮಾರ್ ಅಳವಡಿಕೆಗೆ ಮಾಜಿ ಸಚಿವರಿಂದ ಇಂಧನ ಸಚಿವರಿಗೆ ಮನವಿ
Monday, September 1, 2025
ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಗ್ರಾಮದ ದಡ್ಡಾಲ್ಪಲ್ಕೆಯಲ್ಲಿ ಸಾರ್ವಜನಿಕ ವಿದ್ಯುತ್ ಉಪಕೇಂದ್ರದ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು ಇದಕ್ಕೆ ಕೆ.ಪಿ.ಟಿ.ಸಿ.ಎಲ್. ವಿಭಾಗದಿಂದ ಆದಷ್ಟು ಬೇಗ ಟ್ರಾನ್ಸ್ಫಾರ್ಮಾರ್ ಅಳವಡಿಸುವಂತೆ ಆಗ್ರಹಿಸಿ ಮಾಜಿ ಸಚಿವ ಕೆ.ಅಭಯಚಂದ್ರ ಅವರು ರಾಜ್ಯ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.
ಟ್ರಾನ್ಸ್ ಫಾಮ೯ರ್ ಅಳವಡಿಕೆ ನಡೆಯದ ಕಾರಣ ಈ ಭಾಗದ ಕೃಷಿಕರರಿಗೆ, ಸಾರ್ವಜನಿಕರಿಗೆ ಲೋ ವೋಲ್ಟೇಜ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ.ಹಾಗಾಗಿ ಕೆ.ಪಿ.ಟಿ.ಸಿ.ಎಲ್.ನಿಂದ ಶೀಘ್ರವಾಗಿ ಟ್ರಾನ್ಸ್ ಫಾರ್ಮಾರ್ ಅಳವಡಿಕೆಗೆ ಆದೇಶಿಸಿ ಇಲ್ಲಿನ ಸಮಸ್ಯೆಗೆ ಮುಕ್ತಿ ಕಾಣಿಸಬೇಕೆಂದು ಜೈ ನ್ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಇಲ್ಲಿನ ಸಮಸ್ಯೆಯ ಕುರಿತು ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ಅಭಯಚಂದ್ರರವರಲ್ಲಿ ಹೇಳಿಕೊಂಡಿದ್ದರು.ರುಕ್ಕಯ್ಯ ಪೂಜಾರಿ ಅವರ ಮನವಿಗೆ ಸ್ಪಂದಿಸಿದ ಅಭಯಚಂದ್ರರು ಇದೀಗ ಇಂಧನ ಸಚಿವರಿಗೆ ಮನವಿ ನೀಡಿದ್ದಾರೆ.
ಸುಕುಮಾರ್ ಜೈನ್ ಅಳಿಯೂರು, ಪ್ರದೀಪ್ ಪಣಪಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.