ಹಿಂದೂ ಕ್ಷೇತ್ರಗಳ ವಿರುದ್ಧದ ಷಡ್ಯಂತ್ರವನ್ನು ವಿರೋಧಿಸೋಣ: ನಳಿನ್‌ಕುಮಾರ್

ಹಿಂದೂ ಕ್ಷೇತ್ರಗಳ ವಿರುದ್ಧದ ಷಡ್ಯಂತ್ರವನ್ನು ವಿರೋಧಿಸೋಣ: ನಳಿನ್‌ಕುಮಾರ್

ಕಟೀಲಿನಲ್ಲಿ ಧರ್ಮಸ್ಥಳದ ವಿರುದ್ಧ ಧರ್ಮಜಾಗೃತಿ ಹಾಗೂ ಪ್ರಾರ್ಥನಾ ಸಭೆ


ಕಟೀಲು: ಮಸೀದಿ ಅಥವ ಕ್ರೈಸ್ತರ ಕ್ಷೇತ್ರಗಳಿಗೆ ಹಾನಿಯಾದಲ್ಲಿ ವಿಶ್ವಮಟ್ಟದಲ್ಲಿ ಪ್ರತಿಭಟನೆಗಳಾಗುತ್ತವೆ. ಹಿಂದೂ ಕ್ಷೇತ್ರದ ವಿರುದ್ಧ ನಡೆಯುವ ಷಡ್ಯಂತ್ರವನ್ನೂ ಒಗ್ಗಟ್ಟಿನ ಮೂಲಕ ವಿರೋಧಿಸೋಣ, ಹಿಂದೂ ಕ್ಷೇತ್ರಗಳನ್ನು ರಕ್ಷಣೆ ಮಾಡುವಲ್ಲಿ ನಾವು ಹಿಂದೆ ಬೀಳಬಾರದು, ಹಂತ ಹಂತವಾಗಿ ನಮ್ಮ ದೇವಸ್ಥಾನ, ಮಠ, ಮಂದಿರಗಳ ಮೇಲೆ ಮೊಗಲರ ಕಾಲದಿಂದಲೂ ದಾಳಿ ನಡೆಯುತ್ತಿದೆ. ಈ ಬಗ್ಗೆ ಜನಜಾಗೃತಿ, ಎಚ್ಚರ ನಮ್ಮಲ್ಲಿ ಬೇಕಾಗಿದೆ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.


ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿಯಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಿತಿಯ ಸಂಯೋಜನೆಯಲ್ಲಿ ಧರ್ಮಸ್ಥಳದ ಷಡ್ಯಂತ್ರದ ವಿರುದ್ಧ ಧರ್ಮ ಜಾಗೃತಿ ಮತ್ತು ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದರು.


ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಮೂಲಕ ಡಾ. ವೀರೇಂದ್ರ ಹೆಗ್ಗಡೆಯವರು ದೇಶಾದ್ಯಂತ ಮಾಡಿರುವ ಸಾಮಾಜಿಕ ಕಾರ್ಯಗಳು ಗಮನೀಯ. ಇಂತಹ ಖಾವಂದರ ಜೊತೆಗೆ ನಿಲ್ಲುವ ಕರ್ತವ್ಯ ನಮ್ಮದು. ಷಡ್ಯಂತರ ರೂಪಿಸಿದವರ ಮೇಲೆ ಕಾನೂನು ಕ್ರಮ ಆಗಬೇಕು ಎಂದು ಹೇಳಿದರು.

ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲು ಸಹ ಅಪ್ರಚಾರಕ್ಕೆ ತುತ್ತಾಗಿತ್ತು. ಸುಳ್ಳು ಹೇಳುವವರಿಗೆ ಸಾಕ್ಷಿ ಬೇಕಿಲ್ಲ. ಆದರೆ ಸತ್ಯ ಹೇಳುವವರಿಗೆ ಸಾಕ್ಷಿ ಬೇಕಾಗುತ್ತದೆ. ಜೈನ ಸಮುದಾಯದವರು ನಮ್ಮ ಹಿಂದೂಗಳೇ ಆಗಿದ್ದಾರೆ. ಸನಾತನ ಧರ್ಮವನ್ನು ಒಡೆಯುವ ಕೆಲಸ ಹಿಂದೂ ಕ್ಷೇತ್ರಗಳನ್ನು ಅಪಮಾನಿಸುವ ಮೂಲಕ ಆಗುತ್ತಿದೆ. ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಬೇಕಾಗಿದೆ ಎಂದರು.

ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಬಿಜೆಪಿ ಮುಖಂಡ ಭುವನಾಭಿರಾಮ ಉಡುಪ, ಯಾದವ ಕೋಟ್ಯಾನ್ ಪೆರ್ಮುದೆ, ಬಿಪಿನ್‌ಪ್ರಸಾದ್ ಶೆಟ್ಟಿ ಕೊಡೆತ್ತೂರುಗುತ್ತು, ಕಿಶೋರ್ ಶೆಟ್ಟಿ ಕೊಡೆತ್ತೂರುಗುತ್ತು, ಈಶ್ವರ ಕಟೀಲ್, ದಿನೇಶ್ ಪುತ್ರನ್ ಮತ್ತಿತರರಿದ್ದರು. 

ನಿತೇಶ್ ಶೆಟ್ಟಿ ನಿರೂಪಿಸಿದರು.

ಆರಂಭದಲ್ಲಿ ಗಿಡಿಗೆರೆಯಿಂದ ಕಟೀಲು ರಥಬೀದಿಯವರೆಗೆ ವಿವಿಧ ಭಜನಾ ಮಂಡಳಿಗಳು, ಭಕ್ತರು, ಗಣ್ಯರು ಪಾದಯಾತ್ರೆ ನಡೆಸಿದರು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article