ಸರಳ ಮದುವೆಗಳಿಗೆ ಆದ್ಯತೆ ನೀಡಿ: ಇಕ್ಬಾಲ್ ಬಾಳಿಲ

ಸರಳ ಮದುವೆಗಳಿಗೆ ಆದ್ಯತೆ ನೀಡಿ: ಇಕ್ಬಾಲ್ ಬಾಳಿಲ


ಮೂಡುಬಿದಿರೆ: ಸರಳ ಮದುವೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನೆಬಿ ಮುಹಮ್ಮದ್ ಮುಸ್ತಫಾ (ಸ.ಅ) ಅವರು ತಮ್ಮ ಪ್ರಿಯಪುತ್ರಿ ಫಾತಿಮಾ ಬೀವಿಯವರ ಮದುವೆಗೆ ಕೇವಲ ಹನ್ನೆರಡು ಮಂದಿ ಸ್ವಹಾಬಿಗಳನ್ನು ಮಾತ್ರ ಆಹ್ವಾನಿಸಿದ್ದರು, ಅವರೊಂದು ಮಾತು ಹೇಳುತ್ತಿದ್ದರೆ ಲಕ್ಷಾಂತರ ಮಂದಿ ಸೇರುತ್ತಿದ್ದರು, ಆದರೆ ಅವರು ಹಾಗೆ ಮಾಡಿಲ್ಲ, ಹನ್ನೆರಡು ಮಂದಿ ಸ್ವಹಾಬಿಗಳನ್ನು ಮಾತ್ರ ಆಹ್ವಾನಿಸಿ ಸರಳ ರೀತಿಯಲ್ಲಿ ಮದುವೆ ಮಾಡಿಸಿ ಮಾದರಿಯಾಗಿದ್ದರು,ಅವರು ನಮಗೆ ಅದೇ ಹಾದಿಯನ್ನು ತೋರಿಸಿಕೊಟ್ಟವರು, ಆದರೆ ಇಂದು ನಮ್ಮ ಸಮುದಾಯದ ಮದುವೆಗಳು ಆ ರೀತಿ ನಡೆಯುತ್ತಿಲ್ಲ, ನೆಬಿಯವರ ಆಶಯ, ಆದರ್ಶದಂತೇ ನಮ್ಮ ಸಮುದಾಯದ ಮದುವೆಗಳು ನಡೆಯಬೇಕಿದೆ ಎಂದು ಚಿಂತಕ,ಅಲ್ ಸಲಾಮ ಇಸ್ಲಾಮಿಕ್ ಕೌನ್ಸೆಲಿಂಗ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಅವರು ಹೇಳಿದರು.

ಅವರು ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಬಿ-ಹ್ಯೂಮನ್ ಸರ್ವಿಂಗ್ ಹ್ಯುಮಾನಿಟಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ನಡೆದ ‘ಸಭೆ ಸಮಾರಂಭಗಳಲ್ಲಿ ಶಿಸ್ತು ಪಾಲನೆ’ ಕುರಿತು ಅವರು ಮಾತನಾಡಿದರು.

ಮುಸ್ಲಿಂ ಸಮುದಾಯದ ಮದುವೆಗಳಿಂದು ಆಡಂಬರದಿಂದ ನಡೆಯುತ್ತಿದೆ ,ದುಂದುವೆಚ್ಚದಿಂದ ನಡೆಯುತ್ತಿದೆ, ಊಟ ವ್ಯರ್ಥವಾಗುತ್ತಿದೆ, ತಾನು ಕಡಿಮೆಯಾಗಬಾರದೆಂಬ ನಿಟ್ಟಿನಲ್ಲಿ ಕಾಂಪಿಟೀಷನ್ ರೂಪದಲ್ಲಿ ಮದುವೆಗಳು ನಡೆಯುತ್ತಿದೆ, ಈ ರೀತಿಯ ಆಡಂಬರಕ್ಕೆ ಇಸ್ಲಾಂ ಎಲ್ಲೂ ಹೇಳಿಲ್ಲವೆಂದು ಹೇಳಿದ ಅವರು ಇದು ಕಡಿಮೆಯಾಗಬೇಕು, ಉಳ್ಳವರು ಮಾಡುತ್ತಾರೆ, ಆದರೆ ಮದುವೆಗೆ ಬಂದವರಿಗೆ ಅದು ಸಮಾಧಾನ ತರುವಂತಿರಲಿ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಮದುವೆ ಸಮಾರಂಭ ಒಂದು ವಾರ ನಡೆಯುತ್ತಿತ್ತು, ದೂರದೂರದಿಂದ ಕುಟುಂಬ, ಸಂಬಂಧಿಕರೆಲ್ಲಾ ಸೇರಿ ಖುಷಿಪಡುತ್ತಿದ್ದ ಕಾಲವದು, ಇಂದೂ ಒಂದು ವಾರ ಮದುವೆ ನಡೆಯುತ್ತಿದೆ,ಆದರೆ ಅದು ಒಂದೊಂದು ದಿನ ಒಂದೊಂದು ಹೆಸರಿನಲ್ಲಿ ನಡೆಯುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಅತಿಥಿ ಸತ್ಕಾರ ಹೇಗೆ? ಅತಿಥಿಗಳನ್ನು ಸತ್ಕರಿಸಬೇಕಾದವರು ಯಾರು ಎಂಬ ಬಗ್ಗೆ ವಿವರಿಸಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್, ಬಿ- ಹ್ಯೂಮನ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್,ಮೂಡುಬಿದಿರೆ ಘಟಕದ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ, ‘ಆರೋಗ್ಯ ಜಾಗೃತಿ’ ಬಗ್ಗೆ ಮಾಹಿತಿ ನೀಡಿದ ಡಾ.ಫರ್ಹಾನ್ ಝಮೀರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಇರ್ಷಾದ್ ಎನ್.ಜಿ,ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಯುವ ಜನತೆ ಇಂದು ಮಾದಕ ವ್ಯಸನಗಳಿಗೆ ಬಲಿಯಾಗಿ ಮನೆಯವರ ನೆಮ್ಮದಿ ಹಾಳು ಮಾಡುತ್ತಿದ್ದಾರೆ, ಡ್ರಗ್ಸ್ ಮುಕ್ತ ಸಮಾಜ ನಮ್ಮದಾಗಬೇಕು, ಈ ಎಲ್ಲಾ ವಿಷಯಗಳಲ್ಲಿ ನಿಯಂತ್ರಣಗೊಳಿಸಲು ಪ್ರತೀ ಮಸೀದಿಯ ಆಡಳಿತ ಕಮಿಟಿ,ಖತೀಬರ ಪಾತ್ರವೂ ದೊಡ್ಡದಾಗಿರಬೇಕು ಎಂದು ಇಕ್ಬಾಲ್ ಬಾಳಿಲ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article