ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ: ನವಶಕ್ತಿ ಸನ್ಮಾನ

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ: ನವಶಕ್ತಿ ಸನ್ಮಾನ


ಮೂಡುಬಿದಿರೆ: ನವರಾತ್ರಿಯ ಪ್ರಯುಕ್ತ ಇಲ್ಲಿನ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ “ನವರಾತ್ರಿ - ನವಶಕ್ತಿ” ಎಂಬ ವಿಶೇಷ ಕಾಯ೯ಕ್ರಮವನ್ನು ಸೋಮವಾರ ಆಯೋಜಿಸಲಾಯಿತು. 

ಮೂಡುಬಿದರೆ ಪುರಸಭೆಯ ಮುಖ್ಯಾಧಿಕಾರಿ  ಇಂದು.ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ  ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ, ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ ಸಾಧಿಸಲು ಶಕ್ತಿ ಇದೆ" ಎಂದ ಅವರು ಎಕ್ಸಲೆಂಟ್ ಸಂಸ್ಥೆಯ ಸ್ವಚ್ಛ ಪರಿಸರವನ್ನು  ಪ್ರಶಂಸಿಸಿದರು.

ಸಂಸ್ಥೆಯ ಕಾಯ೯ದಶಿ೯  ರಶ್ಮಿತಾ ಜೈನ್ ಅವರು ಮಾತನಾಡಿ ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ. ಇದು ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ. ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿವ೯ಹಿಸುತ್ತಾಳೆ ಎಂದು ಹೇಳಿದರು.

ಸನ್ಮಾನ: ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷ  ಯುವರಾಜ್ ಜೈನ್ ಅವರ ಮಾತೃಶ್ರೀ  ಪದ್ಮಾವತಿ ಅವರನ್ನು   ಸಂಸ್ಥೆಯ ವತಿಯಿಂದ  ಸನ್ಮಾನಿಸಲಾಯಿತು.  

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಕಾರಾತ್ಮಕತೆಯನ್ನು ನವಶಕ್ತಿಗಳು ಸಕಾರಾತ್ಮಕತೆಯನ್ನಾಗಿ ಪಸರಿಸಲಿ ಎಂದರು. 

ನವಶಕ್ತಿ ಸ್ವರೂಪದ ನವನಾರಿಯರಾದ ಅಮರಾಜಿ, ಸುಮಿತ್ರಾ, ಚಂದನಾ, ದೀಪಾ ಉಮೇಶ್ ರಾವ್, ಅನಿತಾ ಸಿಕ್ವೇರಾ, ಸೌಮ್ಯ ಕುಲದೀಪ್, ದಿವ್ಯಾ ಪಡಿವಾಳ್, ರೇಷ್ಮಾ ವಮಾ೯ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇವರನ್ನು  ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ದೀಪಾ ಉಮೇಶ್ ರಾವ್ ಹಾಗೂ ಪ್ರಿಯಾ ಕ್ವಿನಿ  ರೋಡ್ರಿಗಸ್   ಅನಿಸಿಕೆಗಳನ್ನು  ಹಂಚಿಕೊಂಡರು.

ಎಕ್ಸಲೆಂಟ್ ಸಿ ಬಿ ಎಸ್ ಇ  ಶಾಲೆಯ ಪ್ರಾಂಶುಪಾಲರಾರ  ಪ್ರಸಾದ್,  ಅಪೇಕ್ಷಾ ಅವರು  ಉಪಸ್ಥಿತರಿದ್ದರು.

 ಅಚ೯ನಾ ಮತ್ತು ಸ್ವಾತಿ ಕಾಯ೯ಕ್ರಮ ನಿರೂಪಿಸಿದರು. 

ನಂತರ ಎಕ್ಸಲೆಂಟ್ ಪ. ಪೂ ಕಾಲೇಜಿನ ವಿದ್ಯಾಥಿ೯ಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article