
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆಗೆ ನಡ್ಯೋಡಿ ಶಾಲೆಯಲ್ಲಿ ಸನ್ಮಾನ
ದಾನಿ, ಉದ್ಯಮಿ ಐತಪ್ಪ ಆಳ್ವ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರಿ ಶಾಲೆಗಳನ್ನು ಉಳಿಸುವುದು ನಮ್ಮೆಲ್ಲ ಜವಾಬ್ದಾರಿ. ಸರ್ಕಾರಿ ಶಾಲೆಗಳನ್ನು ಉಳಿಸುವ ಕುರಿತು ಜನಪ್ರತಿನಿಧಿಗಳು ಗಂಭೀರ ಯೋಜನೆ ರೂಪಿಸಬೇಕು. ಶಾಲೆಯ ಅಭಿವೃದ್ಧಿಗೆ ವೈಯಕ್ತಿಕ ನೆಲೆಯಲ್ಲಿ ನೆರವಾಗಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಅಭಿನಂದನಾ ಭಾಷಣ ಮಾಡಿ, ವಿನಯವಂತಿಕೆ ಶಿಕ್ಷಣದ ಮುಖ್ಯ ಉದ್ದೇಶ. ಜಗತ್ತಿನಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆ ಅತ್ಯುನ್ನತ ವ್ಯವಸ್ಥೆಯಾಗಿದೆ ಎಂದರು.
ಸಹಶಿಕ್ಷಕಿ ಜೆನೆಟ್ ಲೋಬೋ, ಶಾಲೆಯ ಗೌರವ ಶಿಕ್ಷಕಿಯರಾಗಿದ್ದ ಮಮತಾ ಪೂಜಾರಿ, ಆಶ್ರಿತಾ ಶೆಟ್ಟಿ, ಅತಿಥಿ ಶಿಕ್ಷಕಿ ರಕ್ಷಾ ಅಡುಗೆ ಸಹಾಯಕಿ ಲಲಿತಾ, ಶಾಲಾ ಮಕ್ಕಳಿಗೆ ರಿಕ್ಷಾ ಸೇವೆ ನೀಡುತ್ತಿರುವ ಮೋನಪ್ಪ ಅವರನ್ನು ಗೌರವಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಆಚಾರ್ಯ ಅಧ್ಯಕ್ಷತೆ ವಹಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಆರ್. ಶೆಟ್ಟಿ, ನಡ್ಯೋಡಿ ದೈವಸ್ಥಾನದ ಅಧ್ಯಕ್ಷ ಗೋಪಾಲ ಪೂಜಾರಿ, ಸಲಹಾ ಸಮಿತಿ ಅಧ್ಯಕ್ಷ ದಿಲೀಪ್ ಶೆಟ್ಟಿ, ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಶ್ವತ್ಥ್ ಬಂಗೇರ, ಮರಿಯಾಡಿ ಜುಮ್ಮಾ ಮಸೀದಿ ಗೌರವ ಅಧ್ಯಕ್ಷ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.
ಸಲಹಾ ಸಮಿತಿ ಸದಸ್ಯ ವಿಶ್ವನಾಥ ಕೋಟ್ಯಾನ್ ಸನ್ಮಾನಪತ್ರ ವಾಚಿಸಿದರು. ಸಮಿತಿ ಕಾರ್ಯದರ್ಶಿ, ಪತ್ರಕರ್ತ ಪ್ರಸನ್ನ ಹೆಗ್ಡೆ ನಿರೂಪಿಸಿ, ಯತೀಶ್ ಕೋಟ್ಯಾನ್ ವಂದಿಸಿದರು.