ಮೂಡುಬಿದಿರೆ: ಬನ್ನಡ್ಕ ಶ್ರೀ ಶಾರದೋತ್ಸವ ಟ್ರಸ್ಟ್ ಸಾಂಸ್ಕೃತಿಕ ಕಾರ್ಯಕ್ರಮ-ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ

ಮೂಡುಬಿದಿರೆ: ಬನ್ನಡ್ಕ ಶ್ರೀ ಶಾರದೋತ್ಸವ ಟ್ರಸ್ಟ್ ಸಾಂಸ್ಕೃತಿಕ ಕಾರ್ಯಕ್ರಮ-ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ


ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕ (ರಿ.) ಮೂಡುಬಿದಿರೆ ಇದರ ಮೂಡುಬಿದಿರೆ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯು ಸೆ. 21ರಂದು ಬನ್ನಡ್ಕ ಶ್ರೀ ಗುರು ರಾಘವೇಂದ್ರ ಮಠದ ನಳಿನಾಕ್ಷಿ ಸಭಾಭವನದಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಸೆ. 21ರಂದು ಬೆಳಿಗ್ಗೆ 9.00ರಿಂದ ಚಿತ್ರಕಲಾ ಸ್ಪರ್ಧೆಯು ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಎಲ್‌ಕೆಜಿಯಿಂದ 1ನೇ ತರಗತಿಯವರಿಗೆ ‘ಐಚ್ಛಿಕ’ ವಿಷಯದ ಬಗ್ಗೆ, 2ರಿಂದ 4ನೇ ತರಗತಿಯವರಿಗೆ ‘ಪರಿಸರ’ ವಿಷಯದ ಬಗ್ಗೆ, 5ರಿಂದ 7ನೇ ತರಗತಿಯವರಿಗೆ ‘ಕಾಡು ಮತ್ತು ಪ್ರಾಣಿಗಳು’ ಎಂಬ ವಿಷಯದ ಬಗ್ಗೆ,8 ರಿಂದ 10ನೇ ತರಗತಿಯವರಿಗೆ ‘ಹಳ್ಳಿ ಜೀವನ ಶೈಲಿ’ ವಿಷಯದ ಬಗ್ಗೆ, ಕಾಲೇಜು ವಿಭಾಗದವರಿಗೆ ‘ಗಣಪತಿ’ ಎಂಬ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು 2 ಗಂಟೆ ಕಾಲಾವಕಾಶವಿರುತ್ತದೆ. ಚಿತ್ರಕಲೆಗೆ ಬೇಕಾದ ಹಾಳೆ, ಇತರೆ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು.

1ರಿಂದ 4ನೇತರಗತಿಯವರಿಗೆ, 5 ರಿಂದ 7ನೇತರಗತಿಯವರಿಗೆ, 8 ರಿಂದ 10ನೇತರಗತಿಯವರಿಗೆ, ಕಾಲೇಜಿನವರಿಗೆ, ಸಾರ್ವಜನಿಕರಿಗೆ ಭಕ್ತಿ ಗೀತೆ ಸ್ಪರ್ಧೆ ಕೂಡ ನಡೆಯಲಿದೆ.

ರಂಗೋಲಿ ಸ್ಪರ್ಧೆಯು ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ, ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದ್ದು, 2 ಗಂಟೆ ಕಾಲಾವಕಾಶವಿರುತ್ತದೆ.

ಅ.01ರಂದು ಶ್ರೀಕ್ಷೇತ್ರ ಬನ್ನಡ್ಕದಲ್ಲಿ ಬೆಳಗ್ಗೆ 9.30ರಿಂದ 12.30ರವರೆಗೆ ಸಾರ್ವಜನಿಕರಿಗೆ ‘ಮೆಹೆಂದಿ ಸ್ಪರ್ಧೆ’, ಸಂಜೆ 3.30ರಿಂದ 3 ವರ್ಷದೊಳಗಿನ ಮಕ್ಕಳಿಗೆ, 4ರಿಂದ 6 ವರ್ಷ, 7ರಿಂದ 10 ವರ್ಷದ ಮಕ್ಕಳಿಗೆ ಮುದ್ದು ಶಾರದೆ ಸ್ಪರ್ಧೆ’ ನಡೆಯಲಿದೆ.

ಅ. 02ರಂದು ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ಸಾರ್ವಜನಿಕರಿಗೆ ‘ಹೂ ಕಟ್ಟುವ ಸ್ಪರ್ಧೆ’ ಬೆಳಿಗ್ಗೆ 9.30ರಿಂದ 12.30ರವರೆಗೆ ನಡೆಯಲಿದ್ದು, ಹೂಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article