ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸದಾನಂದ ದೇವಾಡಿಗ ನಿಧನ
Monday, September 15, 2025
ಮೂಡುಬಿದಿರೆ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಅರಮನೆ ಬಾಗಿಲು ಬಳಿಯ ನಿವಾಸಿ ಸದಾನಂದ ದೇವಾಡಿಗ (58) ಅವರು ಅನಾರೋಗ್ಯದಿಂದ ಭಾನುವಾರ ನಿಧನರಾದರು.
ಕಳೆದ ನಾಲ್ವತ್ತು ವರ್ಷಗಳಿಂದ ಕಾಂಗ್ರೆಸ್ ಕಾಯ೯ಕತನಾಗಿ ಗುರುತಿಸಿಕೊಂಡಿದ್ದ ಅವರು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಚುನಾವಣೆಗೆ ನಿಂತ ಸಂದರ್ಭಗಳಲ್ಲಿ ಶ್ರಮಿಸಿದ್ದರು.
ಕಳೆದ ವರ್ಷ ಅವರ ಪತ್ನಿ ನಿಧನರಾಗಿದ್ದರು.