ದಿ. ಕೃಷ್ಣಪ್ಪ ಪೂಜಾರಿ ಸ್ಮರಣಾಥ೯ ಮುದ್ದುಕೃಷ್ಣ ಸ್ಪಧೆ೯, ಮೊಸರು ಕುಡಿಕೆ
ಶ್ರೀ ಕ್ಷೇತ್ರ ಹೊಯಿಪಾಲ ಬೆಟ್ಟ ಇದರ ಆಡಳಿತ ಮೊಕ್ತೇಸರ ರಾಜೇಶ್ ಬಳ್ಳಾಲ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ನೆರವೇರಿಸಿದ ಯುವಕ /ಯುವತಿ ಮಂಡಲದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಮಾರ್ನಾಡು ಅನಂತ ಪದ್ಮನಾಭ ಆಸ್ರಣ್ಣ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಭರತ್ ಕೆ ಶೆಟ್ಟಿ ವಹಿಸಿದರು.
ದಿ.ಕೃಷ್ಣಪ್ಪ ಪೂಜಾರಿ ಅವರ ಪತ್ನಿ ದೇವಕಿ ಹಾಗೂ ಯುವಕ ಮಂಡಲದ ಹಿರಿಯ ಸದಸ್ಯರಾದ ಸದಾಶಿವ ಶೆಟ್ಟಿ ಹಾಗೂ ನವೀನ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಧಿಕಾರಿ ಎ.ಯತೀಂದ್ರ, ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಜಯ ಬಿ, ಮಂಗಳೂರು ಗ್ರಾಮಾಂತರದ ಸಿಡಿಪಿಓ ಶೈಲ ಕೆ. ಕಾರಿಗೆ, ಅಂಗನವಾಡಿ ಮೇಲ್ವಿಚಾರಕಿ ಕಾತ್ಯಾಯನಿ ,ಪಂಚಾಯತ್ ಸದಸ್ಯ ರಮೇಶ ಶೆಟ್ಟಿ, ಯುವತಿ ಮಂಡಲದ ಅಧ್ಯಕ್ಷೆ ಆಶಾ ಸುರೇಂದ್ರ, ಭವಿಷ್ಯತ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯದರ್ಶಿ ಪ್ರಜ್ವಲ್ ಪೂಜಾರಿ ಸ್ವಾಗತಿಸಿದರು. ಸಂದೀಪ್ ಆಚಾರ್ಯ, ಯುವಕ ಮಂಡಲದ ಮಾಜಿ ಅಧ್ಯಕ್ಷ ವೈಷ್ಣವ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 20 ಪುಟ್ಟ ಮಕ್ಕಳು ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ನಂತರ ಜಿಲ್ಲಾ ಬಾಲ ಭವನ ಸಮಿತಿ ವತಿಯಿಂದ ಮಕ್ಕಳಿಗೆ ಭಾವಗೀತೆ ರಸಪ್ರಶ್ನೆ ಹಾಗೂ ಹಾಗೂ ಯುವಕ ಯುವತಿಯರಿಗೆ ವಿವಿಧ ಕ್ರೀಡಾ ಕೂಟಗಳು ನಡೆದವು.