ನಮೋ ಫ್ರೆಂಡ್ಸ್ ಕ್ಲಬ್ ನೆತ್ತೋಡಿ ವತಿಯಿಂದ ಸಂತ್ರಸ್ತರಿಗೆ ದೇಣಿಗೆ ಹಸ್ತಾಂತರ
Monday, September 15, 2025
ಮೂಡುಬಿದಿರೆ: ನಮೋ ಫ್ರೆಂಡ್ಸ್ ಕ್ಲಬ್ ನೆತ್ತೋಡಿ ಇದರ ಪ್ರಾಯೋಜಕತ್ವದಲ್ಲಿ ಪವರ್ ಫ್ರೆಂಡ್ಸ್ ಬೆದ್ರ ಹಾಗೂ ಗಣೇಶೋತ್ಸವ ಸಮಿತಿ ಬೆದ್ರ ಇವುಗಳ ಸಹಕಾರದೊಂದಿಗೆ ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ಒಟ್ಟು ಮೊತ್ತ ರೂ. 1,00,000 ವನ್ನು ಸಂತ್ರಸ್ಥರಿಗೆ ಭಾನುವಾರ ಮೂಡಬಿದಿರೆಯ ಶ್ರೀ ಮಹಾಮಾಯಿ ದೇವಸ್ಥಾನದ ಮುಂಭಾಗದಲ್ಲಿ ಹಸ್ತಾಂತರಿಸಲಾಯಿತು.
ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ್ ಕುಮಾರ್, ನಮೋ ಫ್ರೆಂಡ್ಸ್ ಕ್ಲಬ್ (ರಿ.)ನೆತ್ತೋಡಿ ಇದರ ಅಧ್ಯಕ್ಷ ಕಿರಣ್ ಸುವಣ೯, ಉಪಾಧ್ಯಕ್ಷ ಸುನಿಲ್ ಪೂಜಾರಿ ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿದ್ದರು.