ಕುಣಿತಾ ಭಜನಾ ಸ್ಪರ್ಧೆ: ಪುತ್ತಿಗೆಯ ಗುರುರಾಘವೇಂದ್ರ ಸ್ವಾಮಿ ಭಜನಾ ಮಂಡಳಿ ಪ್ರಥಮ
Monday, September 15, 2025
ಮೂಡುಬಿದಿರೆ: ಕಲ್ಕೂರ ಪ್ರತಿಷ್ಠಾನ ರಾಷ್ಟ್ರೀಯ ಉತ್ಸವದಂಗವಾಗಿ ನಡೆದ ಪಂಡರಿಪುರ ವಿಠಲ ಕುಣಿತಾ ಭಜನಾ ಸ್ಪರ್ಧೆಯಲ್ಲಿ ಪುತ್ತಿಗೆ ಚಿಟ್ಟೆಮಾರು ಗುರುರಾಘವೇಂದ್ರ ಸ್ವಾಮಿ ಭಜನಾ ಮಂಡಳಿ ಪ್ರಥಮ ಸ್ಥಾನ ಗಳಿಸಿದೆ.
ವಸ್ತ್ರ ವಿನ್ಯಾಸ, ಕುಣಿತಾ ಹೆಜ್ಜೆಗಾರಿಕೆ, ಭಜನೆಗೆ ಆಯ್ಕೆ ಮಾಡಿದ ಹಾಡಿನ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಯಿತು. ಲತೀಶ್, ಪೂರ್ಣಿಮಾ, ಅಭಿನಯ ಅನುಷಾ, ಜಯಲಕ್ಷ್ಮೀ, ಅಮೃತ, ಹರ್ಷಿತಾ, ಪೂಜಾ ಹಂಡೆಲು, ವೈಷ್ಣವಿ ಕಳಸಬೈಲು, ಸುಶ್ಮಿತಾ ಕಳಸಬೈಲು, ವರ್ಷ ಮೂಡುಶೆಡ್ಡೆ ಭಜನೆ ತಂಡದಲ್ಲಿದ್ದರು. ಗುರು ಅಶೋಕ್ ನಾಯ್ಕ್ ಕಳಸಬೈಲು ತರಬೇತಿ ನೀಡಿದ್ದರು.