ಮೂಡುಬಿದಿರೆ ತಾ.ಪಂನಲ್ಲಿ ನರೇಗಾ 'ಯುಕ್ತಧಾರ' ತರಬೇತಿ
Thursday, September 25, 2025
ಮೂಡುಬಿದಿರೆ ತಾ.ಪಂ ಸಭಾಂಗಣದಲ್ಲಿ ನರೇಗಾ ಯೋಜನೆಯ 'ಯುಕ್ತಧಾರ' ತರಬೇತಿಯನ್ನು ಬುಧವಾರ ಆಯೋಜಿಸಲಾಯಿತು.
ತಾಂತ್ರಿಕ ಸಂಯೋಜಕ ರಂಜನ್ ಪವನ್ ಬಿ. ಅವರು 2026-27ನೇ ಸಾಲಿನ ಕ್ರಿಯಾಯೋಜನೆಯನ್ನು ಯುಕ್ತಧಾರ ತಂತ್ರಾಂಶದ ಮುಖಾಂತರ ತಯಾರಿ ಕುರಿತು ತರಬೇತಿಯನ್ನು ನೀಡಿದರು.
ಬೇರ್ ಫೂಟ್ ಟೆಕ್ನಿಷಿಯನ್ ಪ್ರಜ್ಞಾ ಅವರು ಜಿಯೋ ಫೆನ್ಸಿಂಗ್ ನೂತನ ಅಪ್ಲಿಕೇಶನ್ ನಲ್ಲಿ ಯಾವ ಮಾದರಿಯಲ್ಲಿ ಜಿಯೋ ಟ್ಯಾಗ್ ಮಾಡುವುದು ಎಂಬುದನ್ನು ವಿವರಿಸಿದರು.
ಪ್ರಥಮ ದರ್ಜೆ ಲೆಕ್ಕಸಹಾಯಕರಾದ ಧನೀಶ್ ಕೆ2 ತಂತ್ರಾಂಶದಲ್ಲಿ ನರೇಗಾ ಸಾಮಾಗ್ರಿ ರಚನೆಯ ಕುರಿತು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಸಾಯಿಶ್ ಚೌಟ (ಗ್ರಾ.ಉ), ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ನರೇಗಾ ಸಿಬ್ಬಂದಿಗಳು, ತಾಲೂಕು ಪಂಚಾಯತ್ ನರೇಗಾ ಸಿಬ್ಬಂದಿಗಳು ಹಾಜರಿದ್ದರು.
