ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 10ನೇ ಆಯುರ್ವೇದ ದಿನಾಚರಣೆ
Thursday, September 25, 2025
ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸೆ.23 ರಂದು ಶಿವರಾಮ ಕಾರಂತ ಸಭಾಂಗಣದಲ್ಲಿ ‘10ನೇ ಆಯುರ್ವೇದ ದಿನಾಚರಣೆ’ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಶಕ್ತಿನಗರದ ಆಯುಷ್ ಕೇರ್ ಕ್ಲಿನಿಕ್‌ನ ವೈದ್ಯ ಡಾ. ಕೃಷ್ಣ ಎಂ. ಗೋಖಲೆ ಅವರು ಹಾಜರಾಗಿ ಆಯುರ್ವೇದದ ಇತಿಹಾಸ, ವಿಧಾನ, ಮಹತ್ವ ಹಾಗೂನೈಸರ್ಗಿಕ ಚಿಕಿತ್ಸೆಯ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಅಧ್ಯಕ್ಷತೆ ವಹಿಸಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಸುರೇಶ್ ಸ್ವಾಗತಿಸಿ, ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಪ್ರತೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್‌ಎಸ್‌ಎಸ್ ಸಹ ಯೋಜನಾಧಿಕಾರಿ ಭವ್ಯಾ ಅತಿಥಿಯನ್ನು ಪರಿಚಯಿಸಿದರು. ನಿಧಿಶ್ರೀ ವಂದಿಸಿದರು.