ಅಂಕಣಕಾರ ಪ್ರೇಮಶೇಖರ್‌ಗೆ ವರ್ಧಮಾನ ಸಾಹಿತ್ಯ, ವಿಕಾಸ್ ಹೊಸಮನಿಗೆ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ

ಅಂಕಣಕಾರ ಪ್ರೇಮಶೇಖರ್‌ಗೆ ವರ್ಧಮಾನ ಸಾಹಿತ್ಯ, ವಿಕಾಸ್ ಹೊಸಮನಿಗೆ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ


ಮೂಡುಬಿದಿರೆ: ಕಥೆ ತನ್ನಿಂತಾನೇ ಬರೆಸಿಕೊಂಡು ಹೋಗುತ್ತದೆ. ಭಾವನೆಗಳ ವಿಹಾರವಾಗಿ ಹೊಸ ಲೋಕ ಸೃಷ್ಠಿಯಾಗುತ್ತದೆ. ಕಥೆಗಳಿಗೆ ಕನ್ನಡದಲ್ಲಿ ತುಂಬಾ ಅವಕಾಶಗಳು ಸಿಗುತ್ತಿವೆ. ಹೊಸ ತಲೆಮಾರಿನ ಕಥೆಗಾರರು ಕೇವಲ ಬಹುಮಾನಗಳಿಗೆ ಮಾತ್ರ ಕಥೆ ಬರೆಯುವುದು ಆತಂಕ ಸೃಷ್ಠಿಸುವಂತದ್ದು. ಇದು ಸಾಹಿತ್ಯ ಸೇವೆಯಾಗುವುದಿಲ್ಲ. ಓದುಗನಿಗೆ ಅದು ಬಹುವಿಧದಲ್ಲಿ ತಲುಪಿದಾಗ ಮಾತ್ರ ಆ ಕಥೆ ಸಾರ್ಥಕವೆನಿಸಿಕೊಳ್ಳುತ್ತದೆ ಎಂದು ಅಂಕಣಕಾರ ಪ್ರೇಮಶೇಖರ್‌ ಹೇಳಿದರು. 

ಅವರು ವರ್ಧಮಾನ ಪ್ರಶಸ್ತಿ ಪೀಠ ಮೂಡುಬಿದಿರೆ ಕೊಡಮಾಡುವ 45ನೇ ವರ್ಷದ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯುತ್ತಿರುವ 78ನೇ ದಸರಾ ಸಾಹಿತ್ಯ-ಸಾಂಸ್ಕೃತಿಕ ಉತ್ಸವದ ಮೂರನೇ ದಿನವಾಗಿರುವ ಬುಧವಾರದಂದು ಸ್ವೀಕರಿಸಿ ಮಾತನಾಡಿದರು.  


ಸಾಹಿತ್ಯದೊಂದಿಗೆ ತಂತ್ರಜ್ಞಾನವಿಲ್ಲವೆಂದಾದರೇ, ಎರಡು ವರ್ಷಗಳ ಹಿಂದೆಯೇ ನನ್ನ ಬರವಣಿಗೆ ನಿಂತುಹೋಗುತ್ತಿತ್ತು. ಕಥೆ ಬರೆಯುವುದನ್ನು ನನ್ನ ಜೀವ ಇರುವವರೆಗೂ ನಿಲ್ಲಿಸುವುದಿಲ್ಲ.  ಹೃದಯದಿಂದ ಬರುವುದೇ ಅದು ಕಥೆ. ಕಥಾ ರಚನೆ ವೃತ್ತಿಯಾಗುತ್ತಿದೆ. ಕಥೆಯಲ್ಲಿನ ಅಪಮೌಲ್ಯಗಳೆಲ್ಲ ಕಥೆಗೆ ಅಂಟಿಕೊಳ್ಳುತ್ತಿದೆ ಎಂದರು.

ಜೈನಮಠದಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದ ಆಂತರಿಕ ಜಾಗೃತಿಯನ್ನು ಮೂಡಿಸುತ್ತ, ಭಾರತೀಯ ಪ್ರಜ್ಞೆಯನ್ನು ಮೂಡಿಸುತ್ತಿರುವವರು ಪ್ರೇಮಶೇಖರ್. ಬರಹಗಳನ್ನು ನಾವು ಓದುವುದು ಸಾಹಿತಿಗೆ ನಾವು ಕೊಡುವ ದೊಡ್ಡ ಗೌರವ.ಕಥೆ ಸಾಹಿತಿಯೊಬ್ಬನ ಕಥೆಯಲ್ಲ, ಅದು ಓದುಗನ ಕಥೆಯಾಗಬೇಕು. ಆಗ ಅದು ಸೃಜನಶೀಲವಾಗಿ ಅರಳಿಸುತ್ತದೆ.ಸೃಜನಶೀಲ ಮನಸ್ಸನ್ನು ಅರಳಿಸುತ್ತದೆ. ಈ ಮೂಲಕ ನಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ನುಡಿದರು. 

ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ವಿಕಾಸ್ ಹೊಸಮನಿ ಹಾವೇರಿಯವರಿಗೆ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಮಾಜಮಂದಿರ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ಪೀಠದ ಅಧ್ಯಕ್ಷ ಎಸ್.ಡಿ ಸಂಪತ್ ಸಾಮ್ರಾಜ್ಯ, ಪ್ರಧಾನ ನಿರ್ದೇಶಕ ಡಾ.ನಾ ಮೊಗಸಾಲೆ, ಕೋಶಾಧಿಕಾರಿ ನೇಮಿರಾಜ ಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಸದಾನಂದ ನಾರಾವಿ, ಸಂಪತ್ ಸಾಮ್ರಾಜ್ಯ ಪ್ರಶಸ್ತಿಪತ್ರವನ್ನು ವಾಚಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article