
ಮೂಡುಬಿದಿರೆ ಪ್ರೆಸ್ ಕ್ಲಬ್ ಸದಸ್ಯರಿಗೆ ಅಂಚೆ ಇಲಾಖೆ ಅಫಘಾತ ವಿಮೆ
Friday, September 19, 2025
ಮೂಡುಬಿದಿರೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ ಪ್ರೆಸ್ ಕ್ಲಬ್ ಸದಸ್ಯರಿಗೆ ಅಂಚೆ ಇಲಾಖೆ ಅಫಘಾತ ವಿಮೆ ನೋಂದಾವಣೆ ಶುಕ್ರವಾರ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ವಿಮಾ ಕಾರ್ಡ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಸಂಘದ ವೆಲ್ಫೇರ್ ನಿಧಿ ಮೂಲಕ ಸದಸ್ಯರಿಗೆ ಉಚಿತ ವಿಮೆ ಮಾಡಲಾಗುತ್ತಿದ್ದು ಸದಸ್ಯರು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆಯಿತ್ತರು. ವಿಮಾ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಮಾತನಾಡಿ ಅಂಚೆ ಇಲಾಖೆ ಮೂಲಕ ಜೀವವಿಮೆ, ಅಫಘಾತ ವಿಮೆ ಹಾಗೂ ಆರೋಗ್ಯ ವಿಮೆ ಮಾಡಿಕೊಳ್ಳುವಂತೆ ಸಲಹೆಯಿತ್ತರು. ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಉಪಾಧ್ಯಕ್ಷ ಹರೀಶ್ ಕೆ ಆದೂರು, ಕೋಶಾಧಿಕಾರಿ ಪ್ರಸನ್ನ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.