
ಚಿತ್ರನಟಿ ವಾಣಿಶ್ರೀಗೆ ಪಿತೃ ವಿಯೋಗ
Tuesday, September 2, 2025
ಮೂಡುಬಿದಿರೆ: ಚಲನಚಿತ್ರ ನಟಿ ವಾಣಿಶ್ರೀ ಅವರ ತಂದೆ, ಹೆಚ್ ಎಂಟಿ ಕಂಪನಿಯ ನಿವೃತ್ತ ಉದ್ಯೋಗಿ ಹರೀಶ್ಚಂದ್ರ (87ವ) ಅವರು ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೂಲತಃ ಮಂಗಳೂರಿನವರಾಗಿರುವ ಅವರು ಮೂಡುಬಿದಿರೆಯ ಪುತ್ತಿಗೆ ವಿವೇಕಾನಂದ ನಗರದಲ್ಲಿದ್ದ ತನ್ನ ಪತ್ನಿಯ ಮನೆಯಲ್ಲಿಯೇ ನೆಲೆಸಿದ್ದರು. ಕಳೆದ ಏಳು ತಿಂಗಳ ಹಿಂದೆ ಬೆಂಗಳೂರಿಗೆ ಮಕ್ಕಳ ಮನೆಗೆ ಹೋಗಿದ್ದ ಅವರು ಅಲ್ಲಿಯೇ ನಿಧನರಾಗಿದ್ದಾರೆ.