ಮೂಡುಬಿದಿರೆ ಮೆಸ್ಕಾಂ ಜನಸಂಪರ್ಕ ಸಭೆ: ಸಿಬಂದಿಗಳ ಕೊರತೆ ನೀಗಿಸಲು ಆಗ್ರಹ
ಅವರು ಮಂಗಳವಾರ ಮೂಡುಬಿದಿರೆ ಮೆಸ್ಕಾಂ ಕಛೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಶಿತಾ೯ಡಿಯಲ್ಲಿ ಮೆಸ್ಕಾಂ ಉಪಕೇಂದ್ರವನ್ನು ಮಾಡಲಾಗಿದೆ ಆದರೆ ಅವಶ್ಯಕವಾಗಿರುವ ಸಿಬಂದಿಗಳನ್ನು ನೇಮಿಸುತ್ತಿಲ್ಲವೆಂದು ಆರೋಪಿದರು.
ಶಿರ್ತಾಡಿ ಸಬ್‌ಸ್ಟೇಶನ್ ಕಾರ್ಯಾಚರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ರುಕ್ಕಯ್ಯ ಪೂಜಾರಿ ಅವರು ಆಗ್ರಹಿಸಿದ್ದು, ಶೀಘ್ರದಲ್ಲೇ ಕಾಯಾ೯ರಂಭಿಸುವ ಭರವಸೆ ನೀಡಲಾಯಿತು.
ಮೂಡುಬಿದಿರೆಯಲ್ಲಿ ಸುಮಾರು 55 ಸಾವಿರ ವಿದ್ಯುತ್ ಸಂಪರ್ಕಗಳಿದ್ದು ಇವುಗಳ ನಿರ್ವಹಣೆಯನ್ನು ಕೇವಲ 42 ಸಿಬ್ಬಂದಿಗಳು ಮಾಡಬೇಕಿದೆ. ಇದರಿಂದ ತಾಕೊಡೆಯಂತಹ ಗ್ರಾಮಾಂತರ ಪ್ರದೇಶಗಳಲ್ಲಿ 36 ತಾಸುಗಳಿಗೂ ಹೆಚ್ಚುಕಾಲ ವಿದ್ಯುತ್ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ಮೆಸ್ಕಾಂ ಸಹಾಯವಾಣಿಯೂ ಸೂಕ್ತವಾಗಿ ಕರ‍್ಯನಿರ್ವಹಿಸುತ್ತಿಲ್ಲ, ವಾಟ್ಸಪ್ ಮೂಲಕ ನೀಡಿದ ದೂರುಗಳಿಗೆ ಹಲವು ಗಂಟೆಗಳಾದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಜೈಸನ್ ತಾಕೊಡೆ ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂತೋಷ್ ಕುಮಾರ್, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಮೋಹನ್, ಶಾಖಾಧಿಕಾರಿ ಪ್ರವೀಣ್, ವಿವಿಧ ವಿಭಾಗಳ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.
