ಜಾತಿ ಗಣತಿ ಸಮಸ್ಯೆ: ಪರಿಹಾರಕ್ಕೆ ಶಾಸಕರಲ್ಲಿ ಗಣತಿದಾರರ ಆಗ್ರಹ

ಜಾತಿ ಗಣತಿ ಸಮಸ್ಯೆ: ಪರಿಹಾರಕ್ಕೆ ಶಾಸಕರಲ್ಲಿ ಗಣತಿದಾರರ ಆಗ್ರಹ


ಮೂಡುಬಿದಿರೆ: ಜಾತಿ ಗಣತಿಯಲ್ಲಿನ ಸಮಸ್ಯೆಗಳ ಬಗ್ಗೆ ತನ್ನ ಗಮನಕ್ಕೆ ತಂದಿದ್ದು, ಅವರ ಸಮಸ್ಯೆಗಳನ್ನು  ಆದಷ್ಟು ಬೇಗ  ಪರಿಹರಿಸುವಂತೆ ಸರಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಗಣತಿದಾರರಿಗೆ ಭರವಸೆ ನೀಡಿದರು.

ಹಿಂದುಳಿದ ವಗ೯ಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆಥಿ೯ಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮೂಡುಬಿದಿರೆ ಶಿಕ್ಷಣ ಇಲಾಖೆಯ ಗಣತಿದಾರರು ಮಂಗಳವಾರ ಶಾಸಕರ ಗಮನಕ್ಕೆ ತಂದಾಗ ಸಮಸ್ಯೆಯನ್ನು ಆಲಿಸಿದ ಕೋಟ್ಯಾನ್ ಅವರು ಪರಿಹರಿಸಲು ಯತ್ನಿಸುವುದಾಗಿ  ತಿಳಿಸಿದರು.


ಗಣತಿದಾರರಾಗಿ ಆಯ್ಕೆಯಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಹಲವಾರು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. 

ಈಗಾಗಲೇ ಏಪ್ರಿಲ್ ನಲ್ಲಿ ನಡೆಸಿದ ಒಳಮೀಸಲಾತಿಯ ಭತ್ಯೆ ಮತ್ತು ಹಾಜರಾತಿ ಪತ್ರವನ್ನು ನೀಡಬೇಕು, ಗಣತಿಗೆ ನೀಡಿರುವ  ಆಪ್ ನಲ್ಲಿ ಎದುರಿಸುತ್ತಿರುವ ತಾಂತ್ರಿಕ ದೋಷಗಳನ್ನು ನಿವಾರಿಸಬೇಕು, ಶಿಕ್ಷಕರಿಗೆ ಅವರ ಕ್ಲಸ್ಟರ್ ನೊಳಗೆ ಗಣತಿ ಕಾಯ೯ಕ್ಕೆ ನೇಮಿಸಬೇಕು, 15 ದಿನಗಳೊಳಗೆ 200 ಮನೆಗಳ ಸಮೀಕ್ಷೆ ಪೂರ್ಣಗೊಳಿಸುವುದು ಅಸಾಧ್ಯ ಆದ್ದರಿಂದ ಮನೆಗಳ ಸಂಖ್ಯೆಯನ್ನು ಗರಿಷ್ಠ 50ಕ್ಕೆ ಸೀಮಿತಗೊಳಿಸುವುದು, ಸ್ಥಳ ಬದಲಾವಣೆ ಮಾಡುವುದು, ತರಬೇತಿಯ ಅವಧಿಯಲ್ಲಿ ಹಾಜರಿದ್ದು ಇದೀಗ ಕೈಬಿಟ್ಟಿರುವ ಗಣತಿ ಶಿಕ್ಷಕರನ್ನು ಕೂಡಲೇ ಸೇಪ೯ಡೆಗೊಳಿಸಿ ಗಣತಿ ಕಾಯ೯ಕ್ಕೆ ಸಹಕರಿಸಲು ಸೂಚನೆ ನೀಡಬೇಕು ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್, ಕಾಯ೯ದಶಿ೯ ಮೆಲ್ವೀನ, ಕೋಶಾಧಿಕಾರಿ ಅಚ೯ನಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article