ವಿಜೋಯ್ ಅಶ್ವಿನ್ ಕಾರ್ಡೋಜ ನೇತೃತ್ವದಲ್ಲಿ ಪುತ್ತಿಗೆಯಲ್ಲಿ ಆರೋಗ್ಯ ಶಿಬಿರ
Monday, September 22, 2025
ಮೂಡುಬಿದಿರೆ: ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದರಿಂದ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಪರೀಕ್ಷಿಸಲು ಉತ್ತಮ ಅವಕಾಶ ಎಂದು ಮೂಡುಬಿದಿರೆ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಹೇಳಿದರು.
ವಿಜೋಯ್ ಅಶ್ವಿನ್ ಕಾರ್ಡೋಜ ನೇತೃತ್ವದಲ್ಲಿ ಪುತ್ತಿಗೆ ಗ್ರಾಪಂ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಸಹಯೋಗ ಶ್ರೀ ಸೋಮನಾಥೇಶ್ವರ ಸಂಜೀವಿನಿ ಒಕ್ಕೂಟ ಪುತ್ತಿಗೆ, ಐಸಿವೈಎಮ್ ಹಾಗೂ ಕಥೊಲಿಕ್ ಸಭಾ ಸಂಪಿಗೆ ಘಟಕ, ಡೈಲಿ ಹಾಗೂ ಶ್ರೀದೇವಿ ಕ್ರಿಕೆಟರ್ಸ್, ನೆಲ್ಲಿಗುಡ್ಡೆ ಮಿತ್ರ ಮಂಡಳಿ ಹಾಗೂ ಇನ್ನರ್‌ವಿಲ್ ಕ್ಲಬ್ ಮೂಡುಬಿದಿರೆ ಸಹಕಾರದೊಂದಿಗೆ ಪುತ್ತಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷ ದಯಾನಂದ, ಫುಡಾರ್ ಗ್ರೂಪ್ ಕಂಪೆನಿ ಸಿಇಒ ವಿಜೋಯ್ ಅಶ್ವಿನ್ ಕಾರ್ಡೋಜ, ಐಸಿವೈಎಂ ಉಪಾಧ್ಯಕ್ಷೆ ಜಾಯಿಲಿನ್, ಗ್ರಾಪಂ ಸಿಬ್ಬಂದಿ ಸಂಜೀವ್ ನಾಯ್ಕ್ ಸಹಿತ ಗಣ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ದಂತ ಚಿಕಿತ್ಸೆ, ಕಣ್ಣು ತಪಾಸಣೆ, ಮಕ್ಕಳ ತಜ್ಞರು ಹಾಗೂ ಸ್ತ್ರೀ ರೋಗಗಳ ಬಗ್ಗೆ ಸುಮಾರು 120 ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ಹಾಗೂ ಮಾಹಿತಿ ಪಡೆದರು.