ಕಲ್ಲಬೆಟ್ಟು ಶ್ರೀ ಗಣೇಶ ಸೇವಾಧಾಮ ಕಟ್ಟಡ ನಿರ್ಮಾಣ: ಸಮಾಲೋಚನ ಸಭೆ
ಟ್ರಸ್ಟ್ ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಲಬೆಟ್ಟು ಗಣೇಶೋತ್ಸವವನ್ನು ಪ್ರಾರಂಭಿಸಿ 24 ವರ್ಷಗಳಾಗಿವೆ. 2008ನೇ ಇಸವಿಯಲ್ಲಿ ಶ್ರೀ ಗಣೇಶ ಸೇವಾ ಟ್ರಸ್ಟ್ ರಿ. ಕಲ್ಲಬೆಟ್ಟು ಪ್ರಾರಂಭಿಸಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡಿರುತ್ತೇವೆ. ಅಶಕ್ತರಿಗೆ ಸಹಾಯ ಧನ, ಮನೆ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಶಿಬಿರ ಸಹಿತ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ.
ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟು ರಾಜ್ಯ ಹೆದ್ದಾರಿ ಬಳಿಯಲ್ಲಿ 35 ಸೆಂಟ್ಸ್ ಜಾಗವನ್ನು ಟ್ರಸ್ಟ್ ಹೆಸರಿನಲ್ಲಿ ಈಗಾಗಲೇ ಖರೀದಿಸಲಾಗಿದೆ. ಈಗಾಗಲೇ ಅಂದಾಜು ಮೊತ್ತ 1.50 ಕೋಟಿ ರೂಪಾಯಿಯ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುವ ಕಟ್ಟಡದ ನೀಲ ನಕಾಶೆ ತಯಾರಿಸಿದ್ದು, ಪುರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಯನ್ನು ತೆಗೆದುಕೊಳ್ಳಲಾಗಿದೆ. ದಾನಿಗಳ ಸಹಕಾರದಿಂದ ಈ ಕಟ್ಟಡ ನಿರ್ಮಿಸಲಾಗುವುದು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕಟ್ಟಡ ನಿರ್ಮಾಣದಿಂದ ನಿರಂತರ ಚಟುವಟಿಕೆಗಳಿಗೆ ಪೂರಕವಾಗುವುದು ಹಾಗೂ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿದರು.
ಟ್ರಸ್ಟಿಗಳಾದ ಶ್ರೀಪತಿ ಭಟ್, ಪದ್ಮಯ್ಯ ಬಿ ಸುವರ್ಣ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಸ್ವರ್ಣ ಗೌರಿ ಮಾತೃಮಂಡಳಿಯ ಅಧ್ಯಕ್ಷೆ ಪ್ರಿಯಾಂಕ ರಂಜಿತ್ ಬರ್ಮನ್ ಉಪಸ್ಥಿತರಿದ್ದರು
ಜಿ.ಕೆ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ರೋಹನ್ ಅತಿಕಾರಿಬೆಟ್ಟು ನಿರೂಪಿಸಿದರು.