"ಭಕ್ತಿದ ನಲಿಕೆ" ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ
Monday, September 22, 2025
ಮೂಡುಬಿದಿರೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೈಲಬೆಟ್ಟು ಕಲ್ಲಮುಂಡ್ಕೂರಿನಲ್ಲಿ ಅಕ್ಟೋಬರ್ 26ರಂದು ನಡೆಯಲಿರುವ "ಭಕ್ತಿದ ನಲಿಕೆ " ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಮಂಜುನಾಥ್ ಭಟ್. ಆಡಳಿತ ಮೊಕ್ತೇಸರರಾದ ಜಯಪ್ರಕಾಶ್ ಪಡಿವಾಳ್, ಮಾಲ್ದಬೆಟ್ಟು ಅವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣ ಕುಲಾಲ್, ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲ್. ಕಾರ್ಯದರ್ಶಿ ವಾಸು ನಾಯ್ಕ್, ಕೆ ಎಫ್ ಸಿ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್. ಅಧ್ಯಕ್ಷ ಮೇಘನಾಥ ಕೋಟ್ಯಾನ್, ಶ್ರೀ ಮಹಮ್ಮಾಯಿ ಸೇವಾ ಭಜನಾ ಮಂಡಳಿ ಕೋಟೆಬಾಗಿಲು ಇದರ ಅಧ್ಯಕ್ಷ ಭಾಸ್ಕರ್ ಕುಲಾಲ್ ಹಾಗೂ ಭಜನಾ ತಂಡದ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.