ವಿದ್ಯಾಥಿ೯ಗಳು ಎಐ ತಂತ್ರಜ್ಞಾನವನ್ನು ಅಥ೯ಮಾಡಿಕೊಳ್ಳುವುದು ಅವಶ್ಯಕ: ಸಚಿವ ದಿನೇಶ್ ಗುಂಡೂರಾವ್
ಅವರು ವಜ್ರ ಮಹೋತ್ಸವ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಸೋಮವಾರ ನಡೆದ ವಿಶೇಷ ಎಐ ಮತ್ತು ಕೋಡಿಂಗ್ ಬೂಟ್ ಶಿಬಿರವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ, ಮಾಹೆ ಪ್ರೊ ಚಾನ್ಸಲರ್ ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ ಡಾ.ಹೆಚ್.ಎಸ್. ಬಲ್ಲಾಳ್ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾದದ್ದು ಇದು ಜ್ಞಾನವನ್ನು ಬದಲಿಸುವುದಲ್ಲದೇ ಅದನ್ನು ವೃದ್ಧಿಸಲು ಸಹಾಯವಾಗುತ್ತದೆ. ಅನೇಕ ವಿದ್ಯಾರ್ಥಿಗಳಿಗೆ ಎಐ ಬಗ್ಗೆ ಅರಿವು ಇಲ್ಲದಿರುವುದರಿಂದ ಅವರಿಗೆ ಇತ್ತೀಚಿನ ಅಭಿವೃದ್ಧಿಗಳನ್ನು ತಿಳಿಸುವುದು ಅಗತ್ಯವಾಗಿದೆ. ಅಮೇರಿಕಾ ಮತ್ತು ಚೀನಾ ದೇಶಗಳು ಎಐ ಕ್ಷೇತ್ರದಲ್ಲಿ ಬಹಳ ಮುನ್ನಡೆ ಸಾಧಿಸಿದೆ ಅದರಂತೆ ಭಾರತವು ಕೂಡಾ ಮುನ್ನಡೆ ಬರಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶ್ರಮವಹಿಸಬೇಕು’ ಎಂದು ಸಂದೇಶ ನೀಡಿದರು.
ಕಾಲೇಜಿನ ಹಳೆ ವಿದ್ಯಾರ್ಥಿ, ಸಂಜಯ್ ಭಟ್, ಸಂಸ್ಥಾಪಕರು, ಮೈಂಡ್ಫುಲ್ ಕನ್ಸಲ್ಟಿಂಗ್ ಇವರು ಒಂದು ವಾರ ನಡೆಯಲಿರುವ ಬೂಟ್ ಶಿಬಿರದ ವಿವರವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ವಿಶ್ವಸ್ಥ ಮಂಡಳಿ ಸದಸ್ಯ ರಮಾನಾಥ್ ಭಟ್, ತೆಂಕಮಿಜಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರು ಎಂ.ಎನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ , ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್, ಕಾರ್ಯಕ್ರಮ ಸಂಯೋಜಕಿ ಗಣಕ ಶಾಸ್ತ್ರಉಪನ್ಯಾಸಕಿ ಕೀರ್ತಲಾ, ವಿಭಾಗ ಮುಖ್ಯಸ್ಥ ಸಂದೀಪ್ ಉಪಸ್ಥಿತರಿದ್ದರು. ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿ, ಕೋಡಿಂಗ್ ಕ್ಲಬ್ ವಿದ್ಯಾರ್ಥಿ ಪ್ರತಿನಿಧಿ ಕುಶಾಗ್ರ ವಂದಿಸಿದರು. ಅಂತಿಮ ಬಿ.ಸಿ.ಎ ವಿದ್ಯಾರ್ಥಿನಿ ಸಹರೀನ ಕಾರ್ಯಕ್ರಮ ನಿರೂಪಿಸಿದರು.