ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಷ್ಕರಣೆ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ
Monday, September 22, 2025
ಮೂಡುಬಿದಿರೆ: ಚುನಾವಣಾ ಸಮಗ್ರಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ (SIR) ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವು ಸೋಮವಾರ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ, ಮಾಸ್ಟರ್ ಟ್ರೈನರ್ಸ್ಗಳಾದ ಶಿವಪ್ರಸಾದ್ ಹೆಗ್ಡೆ, ತರಬೇತಿ ಅಧಿಕಾರಿಗಳು ಎ.ಜಿ. ಸೋನ್ಸ್ ಐಟಿಐ. ಮತ್ತು ಶ್ರೀ ಮಹಾವೀರ ಪದವಿ ಕಾಲೇಜಿನ ಉಪನ್ಯಾಸಕ ಡಾ. ಹರೀಶ್ ಎಚ್. ಚುನಾವಣಾ ಶಾಖೆಯ ಕೇಶವ ಹಾಗೂ ಮಲ್ಲೇಶ್ ಉಪಸ್ಥಿತರಿದ್ದರು.
201 ಮೂಡುಬಿದಿರೆ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಮೇಲ್ವಿಚಾರಕರು, ಬೂತ್ ಮಟ್ಟದ ಅಧಿಕಾರಿಗಳು ತರಬೇತಿಯಲ್ಲಿ ಹಾಜರಿದ್ದರು.
ಈ ವಿಶೇಷ ಸಮಗ್ರ ಪರಿಷ್ಕರಣೆಯು ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2002 ರಲ್ಲಿ ನಡೆದಿದ್ದು 23 ವರ್ಷಗಳ ಬಳಿಕ ಈ ಪ್ರಕ್ರಿಯೆ ಮತ್ತೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿಯ ಎಲ್ಲಾ ಲೋಪದೋಷಗಳನ್ನು ದೂರಿಕರಿಸಲು ಸಹಕಾರಿಯಾಗಲಿದೆ.

